Sunday, May 5, 2024

ಈಶ್ವರಪ್ಪಗೆ ಗಂಡಸ್ತನವಿಲ್ಲ, ಅವರೊಬ್ಬ ಹೇಡಿ : ಆಯನೂರು ಮಂಜುನಾಥ್

ಶಿವಮೊಗ್ಗ : ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪನವರಿಗೆ ರಾಜಕೀಯ ಗಂಡಸ್ತನವಿಲ್ಲ. ಅವರೊಬ್ಬ ಹೇಡಿ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಕೆಣಕಿದ್ದಾರೆ. 

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಉತ್ತರ ಕುಮಾರ, ಬ್ಲಾಕ್‍ಮೇಲ್ ಮಾಡುವ ರಾಜಕಾರಣಿ, ಬೊಗಳೆ ಬಿಡುತ್ತಾರೆ. ಅವರಿಗೆ ನಿಜವಾಗಿಯೂ ಧೈರ್ಯವಿದ್ದರೆ ಬಂಡಾಯ ಏಳಲಿ ಎಂದು ಸವಾಲ್ ಹಾಕಿದ್ದಾರೆ.

ಈಶ್ವರಪ್ಪ ಮತ್ತು ಅವರ ಪುತ್ರರಿಗೆ ನಿಜವಾಗಿಯೂ ಅನ್ಯಾಯವಾಗಿದೆ ಎನ್ನುವುದಾದರೆ ಬ್ಲಾಕ್‍ಮೇಲ್ ತಂತ್ರ ಬಿಟ್ಟು ಬಂಡಾಯವೆದ್ದು ಸ್ಪರ್ಧೆ ಮಾಡಲಿ. ನನ್ನ ಒಂದು ವೋಟನ್ನು ಅವರಿಗೆ ಹಾಕುತ್ತೇನೆ. ಅದನ್ನು ಬಿಟ್ಟು ಗಂಡಸುತನವಲ್ಲದ ಮಾತನಾಡಬಾರದು. ಸಭೆ ಕರೆಯುತ್ತಾರಂತೆ, ಆ ಸಭೆಗೆ ಜಿಲ್ಲೆಯ ಬಿಜೆಪಿ ಮುಖಂಡರು ಯಾರು ಹೋಗುತ್ತಾರೆ. ನಾನು ನೋಡುತ್ತೇನೆ ಎಂದು ಕಿಡಿಕಾರಿದ್ದಾರೆ.

ಈಶ್ವರಪ್ಪ ಅವರನ್ನು ನಾವು ರಾಜಕಾರಣದಿಂದ ದೂರ ಮಾಡಲಿಲ್ಲ. ಅದು ಶೇ.40ರಷ್ಟರ ಭ್ರಷ್ಟಚಾರದ ಕೊಡುಗೆ. ಶೇ.40ಕ್ಕೆ ಅವರು ಬಲಿದಾನ ಮಾಡಿಕೊಂಡಿದ್ದಾರೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಮತ್ತಷ್ಟು ವಿಜೃಂಭಿಸುತ್ತಿದೆ. ಡಿ.ಹೆಚ್. ಶಂಕರಮೂರ್ತಿ, ಬಿ.ಎಸ್. ಯಡಿಯೂರಪ್ಪ, ಭಾನುಪ್ರಕಾಶ್ ಇವರೆಲ್ಲರೂ ಕುಟುಂಬ ರಾಜಕಾರಣದ ಪ್ರೇಮಿಗಳೇ. ಅದರಲ್ಲೂ ಈಶ್ವರಪ್ಪನವರಂತು ಕಾಂಗರೂ ರೀತಿಯ ಪ್ರೀತಿ. ಮಡಿಲಲ್ಲಿ ಮರಿಯನ್ನು ಇಟ್ಟುಕೊಂಡ ಹಾಗೆ ಮಗ ಕಾಂತೇಶ್‍ನನ್ನು ಇಟ್ಟುಕೊಂಡಿದ್ದಾರೆ. ಅವರು ಜಿಪಂ ಬಿಟ್ಟು ಹೊರಗೆ ಬರುವುದಿಲ್ಲ ಎಂದು ಚಾಟಿ ಬೀಸಿದ್ದಾರೆ.

BSY ಕಾಲಿಗೆ ಬಿದ್ದಿದ್ದನ್ನು ಇಡೀ ರಾಜ್ಯ ನೋಡಿದೆ

ಈಶ್ವರಪ್ಪನವರಿಗೆ ಯಾವುದೋ ಬೋರ್ಡ್ ಅಧ್ಯಕ್ಷ ಸ್ಥಾನ ಕೊಟ್ಟರೂ ಸಾಕಾಗಿದೆ. ಅವರಿಗೆ ಬಿಜೆಪಿಯನ್ನು ವಿರೋಧಿಸುವ ಶಕ್ತಿಯಂತೂ ಇಲ್ಲವೇ ಇಲ್ಲ. ಹಿಂದೆಲ್ಲ ಯಡಿಯೂರಪ್ಪನವರಿಗೆ ಬೈದು, ಒಂದು ಸಮಾರಂಭದಲ್ಲಿ ಯಡಿಯೂರಪ್ಪನವರ ಕಾಲಿಗೆ ಬಿದ್ದಿದ್ದನ್ನು ಇಡೀ ರಾಜ್ಯವೇ ನೋಡಿದೆ. ಇವರ ದೇಶ ಪ್ರೇಮವೆಂದರೆ ಇವರ ಕುಟುಂಬವೇ ಹೊರತು ಬೇರೆ ಏನು ಅಲ್ಲ ಎಂದು ಆಯನೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES