Sunday, May 5, 2024

ನಾನು ಕೊಲ್ಲೂರು ಮೂಕಾಂಬಿಕೆಯಲ್ಲಿ ಬೇಡಿಕೊಂಡಿದ್ದೇನೆ : ಈಶ್ವರಪ್ಪ

ಶಿವಮೊಗ್ಗ : ಪಕ್ಷ ಸರಿಯಾಗಬೇಕೆಂದು ನಮ್ಮ ಹಿತೈಷಿಗಳು ಒತ್ತಾಯ ಮಾಡ್ತಾ ಇದ್ದಾರೆ. ನಾನು ಕೊಲ್ಲೂರು ಮೂಕಾಂಬಿಕೆಯಲ್ಲಿ ಬೇಡಿಕೊಂಡಿದ್ದೇನೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಊಹಾಪೋಹಗಳಿಗೆ ಉತ್ತರ ಕೊಡಲ್ಲ. ಪಕ್ಷದಲ್ಲಿರುವ ದೋಷಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಲೋಪ ಆಗಿವೆ. ಅದನ್ನ ಈ ಚುನಾವಣೆ ಸರಿಪಡಿಸಿಕೊಳ್ಳಬೇಕು ಎಂದರು.

ಪಕ್ಷೇತರ ಅಭ್ಯರ್ಥಿಯಾಗ್ತೀನಿ ಅಂತ ನಾನು ಹೇಳಿದ್ದೀನಾ? ಬೆಂಬಲಿಗರು ಒತ್ತಾಯ ಮಾಡ್ತಾ ಇದ್ದಾರೆ ಅಷ್ಟೇ. ಈ ಬಗ್ಗೆ ಶುಕ್ರವಾರ ಸಭೆ ಸೇರುತ್ತಾರೆ. ಆ ಸಭೆಗೆ ನಾನು ಹೋಗ್ತಾ ಇದ್ದೇನೆ. ಈ ಬಗ್ಗೆ ನಾನು ತೀರ್ಮಾನ ಮಾಡಿಲ್ಲ. ಸಭೆ ಬಳಿಕ ತೀರ್ಮಾನ ಮಾಡ್ತೇನೆ ಎಂದು ತಿಳಿಸಿದರು.

ಬಲಿಪಶು ಅಂತ ನಾನೇ ಅಂದುಕೊಂಡಿಲ್ಲ

ಪ್ರಲ್ಹಾದ್ ಜೋಶಿ ನಮ್ಮ ಮನೆಗೆ ಬಂದಿದ್ರು. ಚುನಾವಣೆ ಬಗ್ಗೆ ಚರ್ಚೆ ಆಗಿದೆ. ಅದೆಲ್ಲಾ ಇಲ್ಲಿ ಹೇಳೋಕೆ ಆಗೋಲ್ಲ. ಚರ್ಚೆ ಆಗಿರುವುದು ಹೌದು, ನಾವಿಬ್ಬರೂ ಸ್ನೇಹಿತರು. ಹಾಗಾಗಿ ಚರ್ಚೆ ಮಾಡಿದ್ದೀವಿ. ಬಲಿಪಶು ಅಂತ ನಾನೇ ಅಂದುಕೊಂಡಿಲ್ಲ. ನೀವು ಯಾಕೆ ಅಂದುಕೊಳ್ತೀರಾ? ಎಂದು ಪ್ರಶ್ನಿಸಿದರು.

ನನ್ನ ಉದ್ದೇಶ ಎಂಪಿ ಆಗೋದು ಅಲ್ಲ

ನಿಮ್ಗೆ ಕುತೂಹಲ ಇರಲಿ. ಇದು ನನ್ನ ರಾಜಕೀಯ ಭವಿಷ್ಯ. ಹಿಂದುಳಿದ ವರ್ಗದ ಜನರು ನನಗೆ ಪೋನ್ ಮಾಡ್ತಾ ಇದ್ದಾರೆ. ಕಾದು ನೋಡ್ತಿನಿ, ಹಿರಿಯರ ಜೊತೆ ಮಾತಾನಾಡ್ತೀನಿ. ನಾನೊಬ್ಬ ಸಂಸದ ಆಗಬೇಕಬೇಕೆಂದಿನಿಲ್ಲ. ಇದನ್ನು ಹಿರಿಯರ ಜೊತೆ ಚರ್ಚೆ ಮಾಡ್ತೀನಿ. ಎಲ್ಲಾ ಹಿತೈಷಿಗಳು ನೋವಿನಿಂದ ಪೋನ್ ಮಾಡ್ತಾ ಇದ್ದಾರೆ. ನನ್ನ ಉದ್ದೇಶ ಎಂಪಿ ಆಗೋದು ಅಲ್ಲ. ಕೂತು ಚರ್ಚೆ ಮಾಡಿ ತೀರ್ಮಾನ ಮಾಡ್ತೀನಿ ಎಂದು ಈಶ್ವರಪ್ಪ ತಿಳಿಸಿದರು.

RELATED ARTICLES

Related Articles

TRENDING ARTICLES