Wednesday, May 8, 2024

ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಲವ್ ಬರ್ಡ್ಸ್’ ಜೋಡಿ

ಬೆಂಗಳೂರು : ಸ್ಯಾಂಡಲ್​ವುಡ್​ ಲವ್ ಬರ್ಡ್ಸ್ ಎಂದೇ ಖ್ಯಾತರಾದ ನಟಿ ಮಿಲನಾ ನಾಗರಾಜ್‌ ಮತ್ತು ನಟ ಡಾರ್ಲಿಂಗ್‌ ಕೃಷ್ಣ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.

ಹೌದು, ಎಂಟು ವರ್ಷ ಲವ್‌ ಮಾಡಿ ಬಳಿಕ ಕುಟುಂಬದವರ ಒಪ್ಪಿಗೆ ಪಡೆದು ಮೂರು ವರ್ಷದ ಹಿಂದೆ ಮದುವೆಯಾದ ಲವ್‌ ಮಾಕ್ಟೆಲ್‌ ಜೋಡಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮಗುವಿನ ಆಗಮನದ ಖುಷಿ ಸುದ್ದಿಯನ್ನು ತಿಳಿಸಿದ್ಧಾರೆ. ಈ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಮಿಲನಾ ನಾಗರಾಜ್‌ ಅವರು ಮಗುವಿಗೆ ಜನ್ಮ ನೀಡಲಿದ್ದಾರೆ.

ಇತ್ತೀಚೆಗೆ ಮೂರನೇ ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು.ಇದರ ಬೆನ್ನಲ್ಲೇ ಖುಷಿ ಸುದ್ದಿ ಹಂಚಿಕೊಂಡಿದ್ದಾರೆ.

ಶುಭಾಶಯ ಅಂದ್ರು ಫ್ಯಾನ್ಸ್‌

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಮಿಲನಾ ನಾಗರಾಜ್‌, ಡಾರ್ಲಿಂಗ್‌ ಕೃಷ್ಣರಿಗೆ ಶುಭಾಶಯಗಳ ಮಹಾಪೂರವೇ ಹರಿದಿದೆ. ಹಲವು ಅಭಿಮಾನಿಗಳು, ಸಹೋದ್ಯೋಗಿಗಳು, ಚಿತ್ರನಟಿಯರು, ನಟರು ಶುಭಾಶಯ ಹೇಳಿದ್ದಾರೆ. ನಿರಂಜನ್‌ ದೇಶ್‌ಪಾಂಡೆ, ರುಕ್ಮಿಣಿ ವಸಂತ್‌, ದಿವ್ಯ ಉರುಡುಗ, ಸುನಯನ, ಸಪ್ತಮಿ ಗೌಡ, ಸಂಯುಕ್ತ ಹೊರನಾಡು ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಕಂಗ್ರಾಜ್ಯುಲೇಷನ್‌ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES