Sunday, May 5, 2024

ನಾನು ಬಿಜೆಪಿ ಎಂಪಿ ಆಗೋಕೆ ಆಸೆ ಪಡ್ತಾ ಇದೀನಿ : ಕೊನೆಗೂ ಮೌನ ಮುರಿದ ಸುಮಲತಾ

ಮಂಡ್ಯ : ನಾನು ಈಗ ಬಿಜೆಪಿ ಎಂಪಿ (ಸಂಸದೆ) ಆಗೋಕೆ ಆಸೆ ಪಡ್ತಾ ಇದೀನಿ ಎನ್ನುವ ಮೂಲಕ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿ ಪಕ್ಷ ಸೇರುವ ಆಸೆ ಬಿಚ್ಚಿಟ್ಟರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂಡ್ಯವನ್ನು ಬಿಟ್ಟು ಹೋಗಲ್ಲ. ಕೆಲವೇ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತೆ ಎಂದು ಹೇಳಿದರು.

ಟಿಕೆಟ್ ನನಗೆ ಸಿಗುತ್ತೆ ನೋಡಿ ಎಂದ ಅವರು, ಟಿಕೆಟ್ ಸಿಗದಿದ್ರೆ ಏನು? ಅಂದ್ರೆ ಮೌನವಾದರು. ಮೈತ್ರಿ ಧರ್ಮ ಪಾಲನೆಗೆ ಜೆಡಿಎಸ್‌ಗೆ ಸ್ವಾಗತ. ತಮಗೆ ಟಿಕೆಟ್ ಸಿಗದೇ ಇದ್ದರೆ ಮೈತ್ರಿ ಪಾಲಿಸುತ್ತೀರಾ? ಎಂದ್ರೆ ಉತ್ತರಿಸದೇ ಸುಮಲತಾ ಮೌನಕ್ಕೆ ಜಾರಿದರು.

ನನ್ನ ಒಂದು ಪಕ್ಷಕ್ಕೆ ಕಂಪೇರ್ ಮಾಡಬೇಡಿ

ನನ್ನ ಒಂದು ಪಕ್ಷಕ್ಕೆ ಕಂಪೇರ್ ಮಾಡಬೇಡಿ. ಹೊಂದಾಣಿಕೆ ಸೀಟು ಹಂಚಿಕೆ‌ ಇರೋದು ಬಿಜೆಪಿ ಹಾಗೂ ಜೆಡಿಎಸ್ ನಡುವೆ. ಇಡೀ ರಾಜ್ಯದಲ್ಲಿ ಸೀಟು ಹಂಚಿಕೆ ಬಗ್ಗೆ ಅವರು ಸಭೆ ಮಾಡ್ತಾರೆ. ಮಂಡ್ಯ ಟಿಕೆಟ್ ಯಾರಿಗೆ ಎಂದು ಹೈಕಮಾಂಡ್ ಹೇಳಬೇಕು. ಮೈತ್ರಿ ಧರ್ಮ ಅನ್ನೋದು ಎರಡು ಪಕ್ಷಗಳ ನಡುವೆ ಇರುವ ಮಾತು. ಮೈತ್ರಿ‌ ಪಾಲನೆಯ ಬಗ್ಗೆ ಮಾತನಾಡುವಷ್ಟು ದೊಡ್ಡ ಮಟ್ಟದಲ್ಲಿ ನಾನಿಲ್ಲ ಎಂದು ತಿಳಿಸಿದರು.

ನಾನು ಯಾವುದರಲ್ಲೂ ಪ್ರಶ್ನೆ ಇಟ್ಟಿಲ್ಲ

ನನಗೆ ಹೈಕಮಾಂಡ್ ವಿಶ್ವಾಸದ ಮಾತು ಹೇಳಿದೆ. ಅದಕ್ಕೆ ನಾನು ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸದ ಮಾತು ಹೇಳ್ತಾ ಇದೀನಿ. ಯಾರು ನಾವು ಅಂದುಕೊಂಡಿದ್ದು ಆಗಬೇಕೆಂದು ಕೂತುಕೊಳ್ಳಲ್ಲ. ಏನು ಬೇಕಾದರೂ ಆಗಲಿ ನೋಡೋಣ. ಬಿಜೆಪಿ ಟಿಕೆಟ್ ಆಗಲಿಲ್ಲ ಅಂದ್ರೆ, ಅದು ಆಮೇಲೆ‌ ನೋಡೋಣ. ನಾನು ಯಾವುದರಲ್ಲೂ ಪ್ರಶ್ನೆ ಇಟ್ಟಿಲ್ಲ ಎಂದು ಸುಮಲತಾ ಹೇಳಿದರು.

RELATED ARTICLES

Related Articles

TRENDING ARTICLES