Tuesday, May 7, 2024

ನಾಸೀರ್ ಹುಸೇನ್ ಪ್ರಜಾಪ್ರಭುತ್ವ ಉಳಿಸಲು ಹೋರಾಟ ಮಾಡ್ತಿದ್ದಾರೆ : ಸಚಿವ ಈಶ್ವರ್ ಖಂಡ್ರೆ

ಬೀದರ್ : ಸಯ್ಯದ್ ನಾಸೀರ್ ಹುಸೇನ್ ಅವರು ಇಂದು ಸಂಸದರಾಗಿದ್ದಾರೆ. ಪ್ರಜಾಪ್ರಭುತ್ವ ಉಳಿಸೋಕೆ ಹೋರಾಟ ಮಾಡ್ತಾ ಇದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ಬೀದರ್‌ನಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಸೀರ್ ಹುಸೇನ್ ಅವರನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ರಾಜಕೀಯ ದುರುದ್ದೇಶ ಮಾಡ್ತಾ ಇದ್ದಾರೆ ಎಂದು ತಿಳಿಸಿದರು.

ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತನ ವಿರುದ್ಧ ಎಫ್ಐಆರ್ ವಿಚಾರವಾಗಿ ಮಾತನಾಡಿ, ದೇಶ ವಿರೋಧಿ ಹೇಳಿಕೆ ‌ನೀಡಿದ ಯಾರೇ ಆದರೂ ಬಿಡುವ ಮಾತಿಲ್ಲ. ಆರೋಪಿಗಳು ಎಲ್ಲೇ ಅಡಗಿದ್ರು, ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸುತ್ತೇವೆ. ಒಂದು ಸಮುದಾಯವನ್ನು ಗುರಿಯಾಗಿಸಿಟ್ಟುಕೊಂಡ ಬಿಜೆಪಿ ಜಾತಿ ಜಾತಿ ನಡುವೆ ಜಗಳ ಹಚ್ಚುತ್ತಿದ್ದಾರೆ ಎಂದು ಕುಟುಕಿದರು.

ಘಟನೆಯಲ್ಲಿ ಯಾರ ಕೈವಾಡ ಇದೆ ?

ನಮ್ಮ ಸರ್ಕಾರ ಈಗಾಗಲೇ ಆರೋಪಿಗಳನ್ನು ಬಂಧನ ಮಾಡಿದೆ. ನಾವು ಯಾರು ಸಮರ್ಥನೆ ಮಾಡಿಲ್ಲ, ಯಾವ ಸಚಿವರು ಸಮರ್ಥನೆ ಮಾಡಿಲ್ಲ. ಇದು ಮಾಧ್ಯಮಗಳ ಸೃಷ್ಟಿ. ದೇಶ ವಿರೋಧಿ, ಸಮಾಜಘಾತುಕ ಶಕ್ತಿಗಳನ್ನ ಧಮನ ಮಾಡುವ ಕೆಲಸವನ್ನ ಕಾಂಗ್ರೆಸ್ ಮಾಡುತ್ತೆ. ಆರೋಪಿಗಳ ಬಂಧನ ಆಗಿದೆ, ತನಿಖೆ ಆಗ್ತಿದೆ. ಘಟನೆಯಲ್ಲಿ ಯಾರ ಕೈವಾಡ ಇದೆ, ಅದರ ಹಿಂದೆ ಯಾರ್ಯಾರು ಇದ್ದಾರೆ. ಯಾರು ಮಾಡಿಸಿದ್ದಾರೆ ಅನ್ನೋದರ ಕುರಿತು ಸಮಗ್ರ ತನಿಖೆ ಆಗುತ್ತೆ. ಕಾಂಗ್ರೆಸ್ ಪಕ್ಷ ಯಾವುದರಲ್ಲೂ ಹಸ್ತಕ್ಷೇಪ ಮಾಡ್ತಿಲ್ಲ ಎಂದು ಹೇಳಿದರು.

ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ

ನಮ್ಮ‌ ಪಕ್ಷದ ಬಗ್ಗೆ ಮಾತನಾಡೋಕೆ ಬಿಜೆಪಿಗೆ ಯಾವುದೇ ನೈತಿಕತೆ ಇಲ್ಲ. ಬಿಜೆಪಿಯವರೇ ಬಾಂಬ್ ಬ್ಲಾಸ್ಟ್ ಮಾಡಿದ್ದನ್ನ ನೀವೆಲ್ಲಾ ನೋಡಿದ್ದೀರಿ. ಅಂತವರಿಗೆ ಲೋಸಕಭೆ ಸದಸ್ಯತ್ವ ಕೊಟ್ಟಿದ್ದನ್ನೂ ನೋಡಿದ್ದೀರ. ಪಾರ್ಲಿಮೆಂಟ್ ಅಟ್ಯಾಕ್, ವಿಮಾನ ಅಪಹರಣ ಯಾರ ಕಾಲದಲ್ಲಿ ಆಗಿದ್ದು? ವಿಮಾನ ಅಪಹರಣ ಸಮಯದಲ್ಲಿ ಭಯೋತ್ಪಾದಕರನ್ನ ಬಿಡುಗಡೆ ಮಾಡಿದ್ದು ಯಾರು? ಅದರ ಬಗ್ಗೆ ಬಿಜೆಪಿಯವರು ಮಾತನಾಡ್ತಾರಾ? ದೇಶದ ಸ್ವತಂತ್ರಕ್ಕೆ, ಅಖಂಡತೆಗೆ ನಾವು ರಕ್ತ ಕೊಟ್ಡಿದ್ದೇವೆ. ದೇಶ ವಿರೋಧಿ ಕೃತ್ಯದಲ್ಲಿ ಯಾರೇ ಭಾಗಿಯಾಗಿದ್ರು ಕ್ರಮ ಆಗುತ್ತೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

RELATED ARTICLES

Related Articles

TRENDING ARTICLES