Wednesday, May 22, 2024

ಮಾಘ ಮಾಸದ ಸಂಕಷ್ಟಹರ ದ್ವಿಜಪ್ರಿಯ ಮಹಾಗಣಪತಿಯ ವಿಶೇಷತೆ ಏನು ಗೊತ್ತಾ?

ಮಾಘಮಾಸದಲ್ಲಿ ಬರುವ ಸಂಕಷ್ಟಹರ ಚತುರ್ತಿಯನ್ನು ನಾವು ದ್ವಿಜಪ್ರಿಯ ಮಹಾಗಣಪತಿಯೆಂದೇ ಪೂಜಿಸುತ್ತೇವೆ.

ಮಾಘ ಮಾಸದ ಸಂಕಷ್ಟಹರ ಮಹಾಗಣಪತಿಯಾದ ದ್ವಿಜಪ್ರಿಯ ಮಹಾಗಣಪತಿಯ ಸಂಕಷ್ಟ ಚತುರ್ಥಿ ಪ್ರಾರಂಭ 28-02-2024 ರ ಮಧ್ಯರಾತ್ರಿ 01:53 ರಿಂದ 29-02-2024 ಬೆಳಗಿನ ಜಾವ 04:18 ರವರೆಗೆ ಚಂದ್ರೋದಯ ಸಮಯ : 28-02-2024 ರ ರಾತ್ರಿ 09:35 ಕ್ಕೆ

ಮಾಘ ಮಾಸದಲ್ಲಿ ಬರುವ ಸಂಕಷ್ಟಹರ ಚತುರ್ಥಿಯನ್ನು ನಾವು ದ್ವಿಜಪ್ರಿಯ ಗಣಪತಿಯೆಂದೆ ಪೂಜಿಸುತ್ತೇವೆ. ದ್ವಿಜಪ್ರಿಯ ಮಹಾಗಣಪತಿಯ ಆರಾಧನೆಯನ್ನು ಮಾಡುವುದರಿಂದ ಶೀಘ್ರವಾಗಿ ಸಂತಾನ ಪ್ರಾಪ್ತಿ, ವಂಶಾಭಿವೃದ್ಧಿ ಉಂಟಾಗುತ್ತದೆ.

ಈ ದಿನ ತುಪ್ಪದ ಅನ್ನ, ಸಿಹಿಅನ್ನ, ಕಡುಬು, ಮೋದಕ, ಚಕ್ಕುಲಿ ಪಾಯಸ ಮಾಡಿದರೆ ಒಳಿತು, ಈ ದಿನ ಪೂಜೆಗೆ ಹಳದಿ ಬಣ್ಣದ ವಸ್ತ್ರಗಳನ್ನು ಗಣೇಶನಿಗೆ ಸಮರ್ಪಿಸಬೇಕು ಹಾಗೂ ಪೂಜೆ ಮಾಡುವವರೂ ಸಹಾ ಹಳದಿ ಬಣ್ಣದ ವಸ್ತ್ರ ಧರಿಸಬೇಕು.

“ಓಂ ಗಂ ಗಾಂ ದ್ವಿಜಪ್ರಿಯ ಮಹಾಗಣಪತಯೇ ನಮಃ” ಎಂದು 1008 ಸಾರಿ ಜಪಿಸಿ. ಗಣೇಶನಿಗೆ ಶ್ರೀಗಂಧ ಮತ್ತು ದೂರ್ವೆ(ಗರಿಕೆ)ಯನ್ನು ಸಮರ್ಪಿಸಿ.

RELATED ARTICLES

Related Articles

TRENDING ARTICLES