Thursday, May 9, 2024

Pankaj Udhas: ಬರೆಯದ ಮೌನ ಕವಿತೆ ಹಾಡಿನ ಖ್ಯಾತ ಗಾಯಕ ಪಂಕಜ್ ಉಧಾಸ್​ ಇನ್ನಿಲ್ಲ

ದೆಹಲಿ: ‘ಚಾಂದ್‌ ಜೈಸ ರಂಗ್‌ನಂತಹ ಘಜಲ್‌ಗಳನ್ನು ಹಾಡಿ ಖ್ಯಾತಿ ಪಡೆದಿದ್ದ ಪದ್ಮಶ್ರೀ ಪ್ರಶಸ್ತಿ ವಿಜೇತ ಪಂಕಜ್ ಉಧಾಸ್ ಇಂದು ಬದುಕಿ ಪ್ರಯಾಣ ಮುಗಿಸಿದ್ದಾರೆ.

ದೀರ್ಘ ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದರು. ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿಯನ್ನು ಅವರ ಪುತ್ರಿ ನಯಾಬ್ ಉಧಾಸ್ ಅವರು ಇನ್‌ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.

 

View this post on Instagram

 

A post shared by Nayaab Udhas (@nayaabudhas)

 ಹಿಂದಿ ಸಿನಿಮಾ ಹಾಗೂ ಭಾರತೀಯ ಪಾಪ್ ಸಂಗೀತಕ್ಕೆ ಗಣನೀಯ ಕೊಡುಗೆ ನೀಡಿದ್ದ ಪಂಕಜ್ ಉಧಾಸ್ ಅವರು 1980 ರಲ್ಲಿ ತಮ್ಮ ಘಜಲ್ ಆಲ್ಬಂ “ಆಹತ್” ನಿಂದ ಖ್ಯಾತಿಯ ಪಡೆದಿದ್ದರು. ನಂತರ “ಮುಕರರ್” “ತರನಂ” “ಮೆಪ್ರಿಲ್ ಹೀಗೆ ಒಂದಾದ ಒಂದರಂತೆ ಹಿಟ್ ಆಲ್ಬಂಗಳನ್ನು ನೀಡಿದ್ದರು.

“ನಾಮ್’ ಸಿನಿಮಾದ “ಚಿಟ್ಟಿ ಆಯೀ ಹೈ” ಅವರಿಗೆ ಬಹಳಷ್ಟು ಜನಪ್ರಿಯತೆ ನೀಡಿದ್ದವು. ಭಾರತ ಸರ್ಕಾರ ಅವರಿಗೆ 2006ರಲ್ಲಿ ಪದ್ಮ ಶ್ರೀ ನೀಡಿ ಗೌರವು ಸಿಕ್ಕಿತ್ತು.

1990ರಲ್ಲಿ ಫಾಯಲ್ ಚಿತ್ರಕ್ಕಾಗಿ ಲತಾ ಮಂಗೇಶ್ವರ್ ಜೊತೆಗಿನ ಅವರ ಯುಗಳ ಗೀತೆ “ಮಹಿಯಾ ತೇರಿ ಕಸಂ,’ 1994ರಲ್ಲಿ ಮೊಹ್ರಾ ಸಿನಿಮಾಕ್ಕಾಗಿ ಸಾಧನಾ ಸರ್ಗಂ ಜೊತೆಗೆ ಅವರು ಹಾಡಿದ “ನ ಕಜೈ ಕಿ ಧರ್” ಜನಪ್ರಿಯವಾಗಿದ್ದವು. ಸಾಜನ್‌, ಯೇ ದಿಲ್ಲಗಿ, ಫಿರ್‌ ತೇರಿ ಕಹಾನಿ ಯಾದ್‌ ಆಯೀ ಮುಂತಾದ ಸಿನಿಮಾಗಳಿಗೂ ಅವರು ಹಿನ್ನೆಲೆ ಗಾಯಕರಾಗಿದ್ದರು.

RELATED ARTICLES

Related Articles

TRENDING ARTICLES