Thursday, May 9, 2024

ಯುವಕರ ವ್ಹೀಲಿಂಗ್‌ ಶೋಕಿಗೆ ಪೋಷಕರಿಗೆ ಶಿಕ್ಷೆ

ಬೆಂಗಳೂರು: ಸಿಲಿಕಾನ್​ ಸಿಟಿ ಸೇರಿದಂತೆ ಹೊರವಲಯದಲ್ಲಿ ಬೈಕ್ ವ್ಹೀಲಿಂಗ್ ಮಿತಿ ಮೀರಿದೆ. ಮೀಸೆ ಚಿಗುರದ ಯುವಕರ ಹುಚ್ಚಾಟಕ್ಕೆ ಪೋಷಕರು ಶಿಕ್ಷೆ ಅನುಭವಿಸುವಂತಾಗಿದೆ. ಇನ್ನೂ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದು ಮಾತ್ರವಲ್ಲ,ಅದೆಷ್ಟೋ ಅಮಾಯಕರು ಪ್ರಾಣಬಿಟ್ಟಿದ್ದಾರೆ.

 ಹೌದು,ಮುಖ್ಯ ರಸ್ತೆಯಲ್ಲೇ ಯುವಕರು ವ್ಹೀಲಿಂಗ್ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುವುದು ಹೆಚ್ಚಾಗಿದೆ. ವ್ಹೀಲಿಂಗ್‌ ಮಾಡುವ ಸವಾರರ ವಿರುದ್ಧ ಪೊಲೀಸರು ಅದೆಷ್ಟೇ ಕಾರ್ಯಾಚರಣೆ ನಡೆಸಿದರೂ, ಪುಂಡರು ಕೇರ್‌ ಮಾಡುತ್ತಿಲ್ಲ.

ಬೈಕ್ ಜತೆ ಸರ್ಕಸ್ ಮಾಡುತ್ತಾ, ಜನಸಂದಣಿಯಿರುವ ರಸ್ತೆಯಲ್ಲೇ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಟಾರ್ಚರ್ ಕೊಡುತ್ತಿದ್ದರು. ವ್ಹೀಲಿಂಗ್ ಮಾಡುತ್ತಿರುವ ಪುಂಡರ ಹಾವಳಿಗೆ ಸಾರ್ವಜನಿಕರು ಭಯಭೀತರಾಗಿದ್ದರು. ಸದ್ಯ ಬೆಂಗಳೂರಿನ ಬಾಣಸವಾಡಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ವ್ಹೀಲಿಂಗ್‌ ಪುಂಡಾಟ ಮಾಡುತ್ತಿದ್ದವರಿಗೆ ಖಾಕಿ ಶಾಕ್ ಕೊಟ್ಟಿದೆ.

ವ್ಹೀಲಿಂಗ್‌ ಮಾಡುತ್ತಿದ್ದ ಕಾರಣಕ್ಕೆ ಮೂರು ದ್ವಿಚಕ್ರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಇಬ್ಬರು ಯುವಕರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಬಾಲಕನೊಬ್ಬ ಬೈಕ್‌ ವ್ಹೀಲಿಂಗ್‌ ಮಾಡಿದ್ದು, ಆತ ಅಪ್ರಾಪ್ತನಾಗಿರುವ ಹಿನ್ನೆಲೆಯಲ್ಲಿ ಪೋಷಕರ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಮಕ್ಕಳ ತಪ್ಪಿಗೆ ಪೋಷಕರು ಶಿಕ್ಷೆಯನ್ನು ಅನುಭವಿಸುವಂತಾಗಿದೆ.
ಬೈಕ್‌ ವ್ಹೀಲಿಂಗ್‌ ಮಾಡುತ್ತಿದ್ದ ಇಬ್ಬರನ್ನು ಜೆ.ಬಿ ನಗರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಸುರಂಜನ್ ದಾಸ್ ಮುಖ್ಯ ರಸ್ತೆಯಲ್ಲಿ ಅಪಾಯಕಾರಿ ಬೈಕ್ ವ್ಹೀಲಿಂಗ್‌ ಮಾಡುತ್ತಿದ್ದರು. ಇಬ್ಬರು ವಾಹನ ಸವಾರರನ್ನು ಬಂಧಿಸಿ ಬೈಕ್ ಜಪ್ತಿ ಮಾಡಿದ್ದಾರೆ. ಇಬ್ಬರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣವನ್ನು ದಾಖಲಿಸಿದ್ದಾರೆ.

ಟ್ರಾಫಿಕ್ ಪೊಲೀಸರ ಕಣ್ತಪ್ಪಿಸಿ ಸಿಕ್ಕಸಿಕ್ಕ ರೋಡ್‌ಗಳಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುವ ಚಟ ಹಲವು ಯುವಕರಲ್ಲಿ ಕಂಡುಬರುತ್ತಿದೆ.

RELATED ARTICLES

Related Articles

TRENDING ARTICLES