Tuesday, May 7, 2024

ಅಹಂನಿಂದ ಮಾತಾಡಿದ್ರೆ ಜನರೇ ಅವ್ರಿಗೆ ಪಾಠ ಕಲಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಅಹಂನಿಂದ ಮಾತನಾಡಿದರೆ ಜನರೇ ಅವರಿಗೆ ಪಾಠ ಕಲಿಸುತ್ತಾರೆ  ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ.

ನಗರದ  ಏರ್‌ಪೋರ್ಟ್‌ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಅಡ್ಡ ಮತದಾನ ಅನ್ನೋದು ಸುಳ್ಳು, ಅಡ್ಡ ಮತದಾನ ರಾಜ್ಯಸಭೆ ಚುನಾವಣೆಯಲ್ಲಿಆಗಲ್ಲ ಎಂದು ಕಾಂಗ್ರೆಸ್ ಗೆ ಅಡ್ಡ ಮತದಾನ ಭೀತಿ ವಿಚಾರದ ಬಗ್ಗೆ ಅವರು ಪ್ರತಿಕ್ರಿಯಿಸಿದರು.

ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾದ ಮೇಲೆ ಕಾಂಗ್ರೆಸ್ ಸಂಪೂರ್ಣ ನಾಶ ಆಗುತ್ತೆ ಮಾಜಿ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್‌ ಹೇಳಿಕೆ ವಿಚಾರ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದವರಿದ್ದಾರೆ ಏನ್ ಬೇಕಾದ್ರು ಹೇಳ್ತಾರೆ ಎಸ್ ಪಿ, ಆಪ್ ,ಝಾರ್ಖಂಡ್,ಬಿಹಾರ ನಮ್ದು ಅನೌನ್ಸ್ ಆಗಿದೆ ಹೊಂದಾಣಿಕೆ ಆಗಬೇಕಾಗಿದೆ. ಈ ಪ್ರಜಾಪ್ರಭುತ್ವದಲ್ಲಿ ಅಹಂ ನಿಂದ ಮಾತಾಡಿದ್ರೆ ಜನ ಅವರಿಗೆ ಪಾಠ ಕಲಿಸುತ್ತಾರೆ ಕಲಬುರಗಿಗೆ ಬಂದು ಚವ್ಹಾಣ್‌ ಏನೇನೋ ಮಾತಾಡಿ ಹೋಗೊದಲ್ಲ ಎಂದು ತಿರುಗೇಟು ನೀಡಿದ್ದಾರೆ.

371 ಜೆ ಈ ಭಾಗಕ್ಕೆ ತಂದಿದ್ಷೇವೆ, ರಾಜ್ಯ ಸರ್ಕಾರ ಐದು ಸಾವಿರ ಕೋಟಿ ಕೊಡುತ್ತಿದೆ. ಕೆಕೆಆರ್ ಡಿಬಿಗೆ ಹತ್ತು ಸಾವಿರ ಕೋಟಿ ಕೊಡಿಸಲು ಹೇಳಿ ಚವ್ಹಾಣ್‌ ಗೆ. ಸುಮ್ಮನೆ ಮಾತಾಡಿ ಹೋಗೊದಲ್ಲ ನಮ್ಮ ಅಸ್ಥಿತ್ವವೇ ನಿಮಗೆ ಗೊತ್ತಿಲ್ಲ ಅಂದ್ರೆ ನಮಗ್ಯಾಕೆ ಟೀಕೆ ಮಾಡ್ತೀರಾ ? ನಾವು ಶಕ್ತಿ ಶಾಲಿ ಇದ್ದೇವೆ ಅಂತಾ ಅವರಿಗೆ ಗೊತ್ತಿಲ್ಲ ಎಂದರು.

ಇದನ್ನೂ ಓದಿ: ಹೊಸ ಉದ್ಯೋಗ ಸೃಷ್ಟಿಗಾಗಿ ಹೊಸ GTDC ಸ್ಥಾಪನೆ: ಸಿಎಂ ಸಿದ್ದರಾಮಯ್ಯ

ಇನ್ನೂ  ಅರಬ್ಬಿ ಸಮುದ್ರದಲ್ಲಿ ಪ್ರಧಾನಿ ಮೋದಿ ಪೂಜೆ ಮಾಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ನವಿಲುಗರಿ ಅಲ್ಲಿ ಹಾಕಿದ್ರೆ ಅಲ್ಲಿ ಬೆಳೆಯುತ್ತೆ ಏನೋ ಗೋತ್ತಿಲ್ಲ.ನಿಸರ್ಗದ ನಿಯಮದ ಪ್ರಕಾರ ನವೀಲುಗರಿ      ಎಲ್ಲಿ ಬೆಳೆಯುತ್ತಾ ಗೋತ್ತಿಲ್ಲ ನಾನು ನಂಬಿಕೆ ಇಟ್ಟಿರೋದು ನಿಸರ್ಗದ ನಿಯಮದ ಪ್ರಕಾರ ನಡೆಯಬೇಕು ನಿಸರ್ಗದ ವಿರುದ್ದ ಯಾರಿಗೂ ಕೂಡ ಯಶಸ್ಸು ಸಿಗೋದಿಲ್ಲ ಇದೆ ಬುದ್ದನ ತತ್ವ ಎಂದು ಲೇವಾಡಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES