Wednesday, January 22, 2025

Oh My God! : 94 ಬಾರಿ ನಿಯಮ ಉಲ್ಲಂಘನೆ, ಬರೋಬ್ಬರಿ 50,500 ದಂಡ ಕಕ್ಕಿಸಿದ ಖಾಕಿ

ಬೆಂಗಳೂರು : ಒಂದಲ್ಲ, ಎರಡಲ್ಲ, ಬರೋಬ್ಬರಿ 94ಬಾರಿ ಸಂಚಾರ ನಿಯಮ ಉಲ್ಲಂಘನೆ. ಖಾಕಿ ಕಣ್ತಪ್ಪಿಸಿ ರಾಜಾರೋಷವಾಗಿ ಓಡಾಡುತ್ತಿದ್ದ ಭೂಪ. ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಈ ಕಿರಾತಕನಿಂದ ಬಿತ್ತು 50,500 ದಂಡ!

ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಪೊಲೀಸರು ಇಂದು ದಂಡಾಸ್ತ್ರ ಪ್ರಯೋಗಿಸಿದ್ದಾರೆ. ಈ ವೇಳೆ ಪದೇ ಪದೆ ಸಂಚಾರ ನಿಯಮ ಉಲ್ಲಂಘಿಸಿದ್ದ ಕಾರು ​ಚಾಲಕ ಪೊಲೀಸರ ಖಜಾನೆ ತುಂಬಿಸಿದ್ದಾನೆ.

ಈ ಘಟನೆ ಪುಲಿಕೇಶಿನಗರ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಂದೇ ಕಾರಿ​ಗೆ ಬರೋಬ್ಬರಿ 50,500 ರೂಪಾಯಿ ದಂಡ ವಿಧಿಸಲಾಗಿದೆ. ದಂಡದ ಬಿಲ್ ಉದ್ದ ನೋಡಿ ಕಾರು ಚಾಲಕ ಒಂದು ಕ್ಷಣ ಶಾಕ್ ಆಗಿದ್ದಾನೆ.

ಮಾರುದ್ದದ ಬಿಲ್, 50,500 ದಂಡ

ಪುಲಿಕೇಶಿನಗರ ಪೊಲೀಸರು ಇಂದು ಅತಿ ಹೆಚ್ಚು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸವಾರರುಗಳನ್ನು ಪತ್ತೆ ಹಚ್ಚಲು ರಸ್ತೆಗಿಳಿದಿದ್ದರು. ದಂಡ ಸಂಗ್ರಹಿಸುವ ವೇಳೆ ಸುಮಾರು 94 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಕಾರು ಚಾಲಕ ಇವರ ಕೈಗೆ ಸಿಕ್ಕಿದ್ದಾನೆ. ಮಾರುದ್ದದ ದಂಡದ ಬಿಲ್ ಹಾಕಿ, ಈತನಿಂದ 50,500 ರೂಪಾಯಿ ದಂಡ ಕಕ್ಕಿಸಿದ್ದಾರೆ.

RELATED ARTICLES

Related Articles

TRENDING ARTICLES