Saturday, May 4, 2024

‘ತಿರಂಗಾ’ ರೂಪದಲ್ಲಿ ‘ರೊಟ್ಟಿ ಬುತ್ತಿ’ ಹೊತ್ತು ದಾಖಲೆ ಬರೆದ ಭಕ್ತರು : ಯಾವ ಜಾತ್ರೆ? ಏನಿದು ವಿಶೇಷ?

ಬೆಳಗಾವಿ : ದೇವ ಜಾತ್ರೆಗಳಲ್ಲಿ ರಥೋತ್ಸವ, ಭಕ್ತರ ದಂಡು, ಪೂಜೆ ಪುಣಸ್ಕಾರಗಳ ಕಾರ್ಯಕ್ರಮಗಳನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ಮಠದ ಭಕ್ತರು ತಮ್ಮ ದೇವರ ಆರಾಧಣೆ ಜೊತೆಗೆ ದೇಶ ಪ್ರೇಮದ ದಾಖಲೆ ಕೂಡ ಬರೆದಿದ್ದಾರೆ.

ತಿರಂಗಾ ರೂಪದಲ್ಲಿ ರೊಟ್ಟಿ ಬುತ್ತಿ ಹೊತ್ತ ಮಹಿಳೆಯರು, ಭವ್ಯ ಮೆರವಣಿಗೆಯಲ್ಲಿ ಸಹಸ್ರಾರು ಭಕ್ತರು. ಇವೆಲ್ಲ ದೃಶ್ಯಗಳು ಕಂಡುಬಂದಿದ್ದು ಬೆಳಗಾವಿ ಜಿಲ್ಲೆಯ ಮುಗಳಖೋಡ ಮಠದಲ್ಲಿ.

ಪ್ರತಿ ವರ್ಷದಂತೆ ಈ ವರ್ಷವೂ ಲಿಂ. ಶ್ರೀ ಯಲ್ಲಾಲಿಂಗ ಮಹಾರಾಜರ 38ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಗ್ರಾಮದಲ್ಲಿ ಒಂದು ವಾರಗಳಿಂದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಈ ಪುಣ್ಯ ಸ್ಮರಣೆಯಲ್ಲಿ ಗ್ರಾಮೀಣ ಭಾಗದ ರೈತರು ಮಠಕ್ಕೆ ಅನ್ನ ಸಮರ್ಪಣೆ ಮಾಡುವುದು ವಾಡಿಕೆ. ಪ್ರತಿ ವರ್ಷವೂ ರೈತ ಮಹಿಳೆಯರು ನೂರಾರು ರೊಟ್ಟಿಗಳನ್ನು ಮಾಡಿಕೊಂಡು ಮಠಕ್ಕೆ ಅರ್ಪಿಸಿ, ತಮ್ಮ ಭಕ್ತಿಯ ಪರಾಕಾಷ್ಠೆ ಮೆರೆಯುತ್ತಾರೆ.

10 ಸಾವಿರ ಮಹಿಳೆಯರು ಭಾಗಿ

ಅದರಂತೆ ಈ ವರ್ಷ ಅಜ್ಜನ ಜಾತ್ರೆಯಲ್ಲಿ ಭಕ್ತಿಯ ಜೊತೆಗೆ ದೇಶಪ್ರೇಮವನ್ನು ಮೆರೆದಿದ್ದಾರೆ. ರೊಟ್ಟಿಯ ಬುಟ್ಟಿಗಳ ಮೇಲೆ ರಾಷ್ಟ್ರಧ್ವಜ ಪ್ರತಿಬಿಂಬಿಸುವ ಕೇಸರಿ, ಬಿಳಿ, ಹಸಿರು ಮೂರು ಬಣ್ಣಗಳನ್ನು ಬುತ್ತಿಯ ಗಂಟನ್ನು ತೆಲೆಯ ಮೇಲೆ ಹೊತ್ತುಕೊಂಡು ಎಲ್ಲರ ಗಮನವನ್ನು ಭಕ್ತರು ಸೇಳದಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿವಿಧ ಭಾಗದ ಭಕ್ತರು ಸೇರಿಕೊಂಡು ಸುಮಾರು 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿ ಅಜ್ಜನವರ ಪುಣ್ಯಸ್ಮರಣೆ ಆಚರಿಸಿದರು.

2 ಕಿ.ಮೀ ಬುತ್ತಿ ಹೊತ್ತು ಪಾದಯಾತ್ರೆ

ಅರಾಧ್ಯ ದೇವರ ಭಕ್ತಿಯ ಜೊತೆಗೆ ರಾಷ್ಟ್ರ ಪ್ರೇಮವೂ ಮೊಳಗಿತು. ಸುಮಾರು ಎರಡು ಕಿ.ಮೀ ಬುತ್ತಿಯನ್ನು ಹೊತ್ತುಕೊಂಡು ಮಹಿಳೆಯರು ಪಾದಯಾತ್ರೆ ನಡೆಸಿದರು. ದಾರಿ ಉದ್ದಕ್ಕೂ ದೇಶಪ್ರೇಮ ಹಾಗೂ ಭಕ್ತಿ ಗೀತೆಗಳು ಮತ್ತಷ್ಟು ಮೆರವಣಿಗೆಗೆ ಮೆರಗು ತಂದವು. ತಿರಂಗದಲ್ಲಿ ಅಜ್ಜನ ಜಾತ್ರೆಯನ್ನು ಗ್ರಾಮಸ್ಥರು ಆಚರಿಸಿದರು. ಈ ಮಠವು ಭಾವೈಕ್ಯತೆಯ ಸ್ಥಳವಾಗಿ ಗುರುತಿಸಿಕೊಂಡಿದೆ ಇಲ್ಲಿ ಯಾವುದೇ ಜಾತಿ ಭೇದ ಪಂಥ ಇಲ್ಲದೆ ಸರ್ವರು ಸಮನಾಗಿ ದೇವರೆ ಬರುವುದು ವಿಶೇಷ.

ವರ್ಲ್ಡ್ ರಿಕಾರ್ಡ್ ಬುಕ್ ನಲ್ಲಿ ಸ್ಥಾನ

ತಿರಂಗ ಧ್ವಜವನ್ನು ಬಿಂಬಿಸುವ ಹಾಗೂ ರಾಷ್ಟ್ರ ಪ್ರೇಮವನ್ನು ಮೆರೆದಿರುವ ವಿಶೇಷ ಕಾರ್ಯಕ್ರಮಕ್ಕೆ ವರ್ಲ್ಡ್ ರಿಕಾರ್ಡ್ ಆ ಬುಕ್ ನಲ್ಲಿ ಸ್ಥಾನಮಾನ ಪಡೆದುಕೊಂಡಿದೆ. ಭಕ್ತರ ಭಕ್ತಿಯಿಂದ ಮಠಕ್ಕೆ ಮತ್ತಷ್ಟು ಕೀರ್ತಿ ಲಭಿಸಿದೆ ಎಂದು ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದ್ದಾರೆ.

ಒಟ್ಟಾರೆ, ದೇಶದಲ್ಲಿ ಭೂಮಿಯಲ್ಲಿ ಮಠಗಳ ಪಾತ್ರ ಅನನ್ಯವಾಗಿದ್ದು ಅನ್ನದಾಸೋಹ, ಅಕ್ಷರ ದಾಸೋಹ, ದೇಶ ಪ್ರೇಮ, ಜಾಗೃತಿ ಮೂಡಿಸುತ್ತಿರುವ ಮಠಗಳ ಕಾರ್ಯ ವೈಖರಿ ವಿಷೇಶವಾಗಿದೆ.

RELATED ARTICLES

Related Articles

TRENDING ARTICLES