Sunday, April 28, 2024

ಧಿಡೀರನೆ ಕುಸಿದ ಈರುಳ್ಳಿ ಬೆಲೆ!: ಕಂಗಾಲಾದ ರೈತರ

ದಾವಣಗೆರೆ : ಕೆಲ ತಿಂಗಳ ಹಿಂದೆ ಈರುಳ್ಳಿಗೆ ಉತ್ತಮ ಬೆಲೆ ಇತ್ತು. ಇದೀಗ ಈರಳ್ಳಿ ಬೆಲೆ ದಿಢೀರ್​ ಅಂತ ಕುಸಿದಿದ್ದು ರೈತನಿಗೆ ದಿಕ್ಕೇ ತೋಚದಂತಾಗಿದೆ. ಭೀಕರ ಬರಗಾಲದ ನಡುವೆಯೂ ರೈತರು ಈರುಳ್ಳಿ ಬೆಳದಿದ್ದರು. ಉತ್ತಮ ಬೆಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಬೆಲೆ ಕುಸಿತವಾಗಿದೆ. ಹೀಗಾಗಿ ರೈತರು ಈರುಳ್ಳಿ ಮಾರದೆ ದರ ಹೆಚ್ಚಳಕ್ಕಾಗಿ ಎರಡು ದಿನಗಳಿಂದ ಕಾಯ್ದು ಕುಳಿತಿರಿದ್ದಾರೆ.

ಇದನ್ನೂ ಓದಿ: ಸಾನಿಯಾ ಮಿರ್ಜಾ ಮತ್ತು ಶಮಿ ನಿಶ್ಚಿತಾರ್ಥ ಫೋಟೊ ವೈರಲ್​!

ದಾವಣಗೆರೆ ಜಿಲ್ಲೆ ರೈತರು ಸಾಕಷ್ಟು ಈರುಳ್ಳಿ ಬೆಳೆದಿದ್ದು, ಮಾರಲು ಎಪಿಎಂಸಿ ಮಾರುಕಟ್ಟೆಗೆ ಬಂದಿದ್ದಾರೆ. ಮಾರುಕಟ್ಟೆಗೆ ಒಂದೇ ದಿನ ಆರು ಸಾವಿರ ಚೀಲ ಈರುಳ್ಳಿ ಬಂದಿದೆ. ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ಬೆಲೆ 3-4 ರೂ. ಆಗಿದೆ. ಇದರಿಂದ ರೈತರು ಆತಂಕಗೊಂಡಿದ್ದು, ಲಾರಿ ಬಾಡಿಗೆಯಾದರು ಸಿಕ್ಕರೆ ಸಾಕು ಎನ್ನುತ್ತಿದ್ದಾರೆ.

ದರ ಹೆಚ್ಚಾಗಬಹುದೆಂದು ರೈತರು ಕಳೆದ 2-3 ದಿನಗಳಿಂದ ಕಾಯ್ದು ಕುಳಿತಿದ್ದಾರೆ. ಟಾಪ್ ಈರುಳ್ಳಿ ದರ ಪ್ರತಿ ಕ್ವಿಂಟಾಲ್​ಗೆ 1500 ರೂಪಾಯಿ ಇದೆ. ಅತ್ಯುತ್ತಮ ದತ್ತ ಈರುಳ್ಳಿ ಬೆಲೆ 1200 ರಿಂದ 1400 ರೂ. ಇದೆ. ಉತ್ತಮ ದಪ್ಪ 1000 ರಿಂದ 1100 ರೂ. ಇದೆ.

RELATED ARTICLES

Related Articles

TRENDING ARTICLES