Sunday, May 12, 2024

ಪ್ರತಿಭಾವಂತ ಪಿಯು ವಿದ್ಯಾರ್ಥಿಗಳಿಂದ “ತ.ರಾ.ಸು” ಪ್ರಶಸ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು : 2024ನೇ ಸಾಲಿನ ಪಿಯುಸಿ ಕನ್ನಡ ಭಾಷೆ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತ.ರಾ.ಸು ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕನ್ನಡ ಉಳುವಿಗಾಗಿ, ಕನ್ನಡ ಕವಿಗಳ ತ್ಯಾಗಕ್ಕಾಗಿ, ಸ್ಮರಣೀಯ ನೆನಪಿಗಾಗಿ ಜನ್ಮಭೂಮಿ ಸಾಂಸ್ಕೃತಿಕ ನಾಗರಿಕರ ವೇದಿಕೆ ವತಿಯಿಂದ ಅರ್ಜಿ ಆಹ್ವಾನಿಸಿದ್ದು, 2024 ನೇ ಸಾಲಿನ ಪಿ.ಯು.ಸಿ. ಪರೀಕ್ಷೆಯಲ್ಲಿ ಪಾಸಾಗಿದ್ದು, ಕನ್ನಡದಲ್ಲಿ ಶೇ.95ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 25ನೇ ವರ್ಷದ “ತ.ರಾ.ಸು” ಪ್ರಶಸ್ತಿಯನ್ನು ನೀಡಿ ಗೌರವಿಸಲಿವೆ.

ಇದನ್ನೂ ಓದಿ: ಅಶ್ಲೀಲ ವೀಡಿಯೋ ಪ್ರಕರಣ SIT ತನಿಖೆಗೆ ಆದೇಶ : ಜರ್ಮನಿಗೆ ಹಾರಿದ ಪ್ರಜ್ವಲ್​ ರೇವಣ್ಣ

ಅರ್ಹ ವಿದ್ಯಾರ್ಥಿಗಳು ಇತ್ತೀಚಿನ ಎರಡು ಭಾವ ಚಿತ್ರ, ಅಂಕಪಟ್ಟಿಯ ನಕಲು ಪ್ರತಿ, ಸ್ಪಷ್ಟವಾದ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಹಾಗೂ ಹೆಸರನ್ನು ಕನ್ನಡದಲ್ಲಿ ಸ್ಪಷ್ಟವಾಗಿ ಬರೆದು ದಿನಾಂಕ 15-05-2024 ರ ಒಳಗೆ  ಈ ಕೆಳಕಂಡ ವಿಳಾಸಕ್ಕೆ ಕಳಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಕಳುಹಿಸಬೇಕಾದ ವಿಳಾಸ:

ಹೆಚ್.ಸಿ.ಕೃಷ್ಣಪ್ಪ (ಪತ್ರಕರ್ತರು) ಸಂಸ್ಥಾಪಕ ಕಾರ್ಯಾಧ್ಯಕ್ಷರು ಜನ್ಮಭೂಮಿ ಸಾಂಸ್ಕೃತಿಕ ನಾಗರಿಕರ ವೇದಿಕೆ(ನೊಂ) ನಂ. 11, 1ನೇ ಮಹಡಿ, ಬಿ ಬ್ಲಾಕ್​, 1ನೇ ಬಿ, ಮುಖ್ಯ ರಸ್ತೆ, ಮತ್ತಿಕೆರೆ, ಬೆಂಗಳೂರು – 560034. ಇಲ್ಲಿಗೆ ಕಳಿಸಿಕೊಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ  6361141346, 9738125494 ಕರೆ ಮಾಡಬಹುದಾಗಿದೆ.

RELATED ARTICLES

Related Articles

TRENDING ARTICLES