Sunday, May 12, 2024

ಪ್ರಜ್ವಲ್​ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ: ತಪ್ಪು ಮಾಡಿದವರು ನೀರು ಕುಡಿಯಲೇ ಬೇಕು-HDK

ಬೆಂಗಳೂರು: ತಪ್ಪು ಮಾಡಿದವನು, ಉಪ್ಪು ತಿಂದವನು ನೀರು ಕುಡಿಯಲೇ ಬೇಕೆ ಎಂದು ಪ್ರಜ್ವಲ್​ ರೇವಣ್ಣ ಅಶ್ಲೀಲ ವೀಡಿಯೋ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನಾಗಲಿ, ಹೆಚ್.ಡಿ ದೇವೇಗೌಡ ಅವರಾಗಲಿ ಈ ರೀತಿಯಲ್ಲಿ ಕೆಲಸ ಮಾಡಿಲ್ಲ, ಹೆಣ್ಣು ಮಕ್ಕಳ ವಿಚಾರದಲ್ಲಿ ಗೌರವ ಕೊಟ್ಟು ಅವರ ಸಮಸ್ಯೆ ಬಗೆಹರಿಸಿ ಕಳಿಸಿದ್ದೇವೆ, ಹಾಸನದ ಚುನಾವಣಾ ಪ್ರಚಾರದ ವೇಳೆ ಪ್ರಕರಣ ಆರಂಭವಾಗಿದ್ದು ವಾಸ್ತವಾಂಶ ಹೊರಬರಲಿ, ತನಿಖೆ ಆದ ಮೇಲೆ ಸತ್ಯಾಸತ್ಯತೆ ಹೊರ ಬರಲಿದೆ. ನೆಲದ ಕಾನೂನಿನಲ್ಲಿ ತಪ್ಪು ಮಾಡಿದವನು, ಉಪ್ಪು ತಿಂದವನು ನೀರು ಕುಡಿಯಲೇ ಬೇಕು, ನಾವು ತಪ್ಪು ಮಾಡಿದವರನ್ನು ಕ್ಷಮಿಸುವುದಿಲ್ಲ, ಹೀಗಾಗಿ ತನಿಖೆಯ ವರದಿ ಬರಲಿ ಬಂದ್ಮೇಲೆ ಮಾತನಾಡುತ್ತೇನೆ ಎಂದರು.

ಇದನ್ನೂ ಓದಿ: ಅಶ್ಲೀಲ ವೀಡಿಯೋ ಪ್ರಕರಣ SIT ತನಿಖೆಗೆ ಆದೇಶ : ಜರ್ಮನಿಗೆ ಹಾರಿದ ಪ್ರಜ್ವಲ್​ ರೇವಣ್ಣ

ಪ್ರಜ್ವಲ್ ರೇವಣ್ಣ ತಪ್ಪಿಸಿಕೊಂಡಿದ್ದರೇ ನನಗೆ ಸಂಬಂಧವಿಲ್ಲ :

ಇನ್ನು, ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರಜ್ವಲ್​ ರೇವಣ್ಣ ತಪ್ಪಿಸಿಕೊಂಡಿದ್ರೆ ನನಗೆ ಸಂಬಂಧವಿಲ್ಲ, SIT ತನಿಖೆಗೆ ಆದೇಶಿಸಿ ಅಧಿಕಾರಿಗಳನ್ನು ನೇಮಿಸಿದ್ದಾರೆ, ವಿದೇಶಕ್ಕೆ ಹೋಗಿದ್ರೆ ಕರ್ಕೊಂಡು ಬರೋ ಜವಾಬ್ದಾರಿ ಅವರದ್ದು, ನಾನು ಉತ್ತರಿಸಕ್ಕಾಗೋದಿಲ್ಲ, ಅವರೇ ಕರ್ಕೊಂಡು ಬರ್ತಾರೆ ಎಂದರು.

RELATED ARTICLES

Related Articles

TRENDING ARTICLES