Tuesday, May 7, 2024

ಇಸ್ರೊದಿಂದ ಐತಿಹಾಸಿಕ ಸಾಧನೆ : ‘ಎಕ್ಸ್ ರೇ ಪೋಲಾರಿಮೀಟರ್’ ಉಪಗ್ರಹ ಉಡಾವಣೆ

ಬೆಂಗಳೂರು : 2024ರ ಹೊಸ ವರ್ಷದ ಮೊದಲ ದಿನವೇ ಭಾರತದ ಬಾಹ್ಯಾಕಾಶ ಉಡ್ಡಯನ ಸಂಸ್ಥೆ (ಇಸ್ರೋ) ಐತಿಹಾಸಿಕ ಉಡಾವಣೆ ಮಾಡಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಹಾತ್ಮಕಾಂಕ್ಷೆಯ ‘ಎಕ್ಸ್ ರೇ ಪೋಲಾರಿಮೀಟರ್ ಉಪಗ್ರಹ’ ಉಡಾವಣೆ ಮಾಡಲಾಗಿದೆ. ಎಕ್ಸ್ ರೇ ಮೂಲಗಳ ನಿಗೂಢತೆ ಹಾಗೂ ಕಪ್ಪುರಂಧ್ರದ ನಿಗೂಢ ಜಗತ್ತಿನ ವಿಸ್ಮಯಗಳನ್ನು ತಿಳಿಯುವ ಉದ್ದೇಶದಿಂದ ಈ ಯೋಜನೆಯನ್ನು ಇಸ್ರೋ ಪ್ರಾರಂಭಿಸಿದೆ.

ಇಂದು ಬೆಳಗ್ಗೆ 9 ಗಂಟೆಯಲ್ಲಿ ಶ್ರೀಹರಿಕೋಟದ ಉಪಗ್ರಹ ಉಡಾವಣಾ ಕೇಂದ್ರದಿಂದ ಈ ಉಪಗ್ರಹ ಹೊತ್ತ ಪಿಎಸ್ಎಲ್‌ವಿ ವಾಹಕವು ನಭಕ್ಕೆ ಚಿಮ್ಮದೆ. 2023ರಲ್ಲಿ ಚಂದಿರನ ದಕ್ಷಿಣ ಧ್ರುವದಲ್ಲಿ ಯಶಸ್ವಿ ಪದಾರ್ಪಣೆಯ ಬಳಿಕ ಹೊಸ ವರ್ಷ 2024ರಲ್ಲಿ ಹೆಚ್ಚಿನ ಸವಾಲುಗಳ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಮುಂದಾಗಿದೆ.

RELATED ARTICLES

Related Articles

TRENDING ARTICLES