Sunday, May 19, 2024

SIT ಡಿಕೆಶಿ ಏಜೆಂಟ್ ಆಗಿ ಕೆಲಸ ಮಾಡುತ್ತಿದೆ : ಶಾಸಕ ಯತ್ನಾಳ್

ವಿಜಯಪುರ : ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ನಿನ್ನೆ ದೇವರಾಜೇಗೌಡ ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನ ಮಾಡಿದವರ ಯಾರು ಅಂತ ಬಹಿರಂಗಪಡಿಸಿದ್ದಾರೆ. ಆಡಿಯೋನೂ ಬಿಡುಗಡೆ ಮಾಡಿದ್ದಾರೆ. ಇಲ್ಲಿ SIT ಸಂಪೂರ್ಣ ಡಿಕೆಶಿ ಏಜೆಂಟ್ ರಾಗಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಎಸ್​ಐಟಿಯಿಂದ ನ್ಯಾಯ ಸಿಗಲ್ಲ ಎಂದಿದ್ದಾರೆ. ಈ ಪ್ರಕರಣವನ್ನ ಸಿಬಿಐಗೆ ಒಪ್ಪಿಸಬೇಕು. ಎಸ್​ಐಟಿಯಲ್ಲಿ ಇರುವ ಅಧಿಕಾರಿಗಳೆಲ್ಲ ರಾಜ್ಯದವರು. ಡಿಕೆಶಿ ಕಂಟ್ರೋಲ್​​​ನಲ್ಲಿ ಇರುವವರು, ನೇರವಾಗಿ ಡಿಕೆಶಿ ಹೇಳ್ತಾರೆ ಹೆಸರನ್ನು ಅಲ್ಲಿಂದ ತಗೆಯಬೇಕಂತ. SITಯಿಂದ ನಮಗೆ ನ್ಯಾಯ ಸಿಗಲ್ಲ. ಮೊದಲೇ ಹೇಳಿದ್ದೆ ಇದೊಂದು ಫ್ಯಾಕ್ಟರಿ ಇದೆಯಂತ. ಇದೊಂದು ಓಪನ್ನ ಆಗಿದೆ, ಇನ್ನೊಂದು ಓಪನ್ ಆಗುತ್ತೆ ಎಂದು ಕುಟುಕಿದ್ದಾರೆ.

ಇದಕ್ಕೆ ಕಾಂಗ್ರೆಸ್ ನೇರ ಹೊಣೆ

ಪ್ರಜ್ವಲ್​​​​​ ಕೇಸ್​​​ನಿಂದ ಮತದಾನದ ಮೇಲೆ ಪರಿಣಾಮ ಬೀರುತ್ತಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ನಮ್ಮ ಮೇಲೆ ಯಾವುದೇ ಪರಿಣಾಮ ಅಗಲ್ಲ. 14 ಲೋಕಸಭಾಯಲ್ಲಿ ಬಿಜೆಪಿ ಅಭ್ಯರ್ಥಿಗಳು ಇದ್ದಾರೆ. ಇಲ್ಲಿ ಜೆಡಿಎಸ್ ನವರು ಯಾರು ಇಲ್ಲ ಎಂದಿದ್ದಾರೆ. 2019ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಇದ್ದಾಗ ಈ ಪ್ರಕರಣ ನಡೆದಿದೆ. ಹೀಗಾಗಿ, ಇದಕ್ಕೆ ಕಾಂಗ್ರೆಸ್ ನೇರ ಹೊಣೆ ಎಂದು ಶಾಸಕ ಯತ್ನಾಳ್ ದೂರಿದ್ದಾರೆ.

RELATED ARTICLES

Related Articles

TRENDING ARTICLES