Thursday, May 9, 2024

ಲವ್ ಜಿಹಾದ್​ಗೆ ಬಲಿಯಾಗದಂತೆ ಯುವತಿಯರಿಗೆ ಆಣೆ ಪ್ರಮಾಣ

ಗದಗ: ಲವ್ ಜಿಹಾದ್ ಆತಂಕ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಆಣೆ ಪ್ರಮಾಣ ಮಾಡಿಸಿರುವ ಘಟನೆ ಗದಗ ನಗರದ ವಿಠ್ಠಲ ರೂಢಮಠದಲ್ಲಿ ಜಾಗೃತಿ ಸಭೆಯಲ್ಲಿ ಅರಿವು ಕಾರ್ಯಕ್ರಮದಲ್ಲಿ ಪ್ರಮಾಣವಚನ ಸ್ವೀಕಾರ ಮಾಡಲಾಯಿತು.

ಇದೇ ವೇಳೆ ಪೋಷಕರು ಸುಮಾರು 200 ಯುವತಿಯರಿಗೆ ಅನ್ಯ ಧರ್ಮಿ ಯುವಕರ ಲವ್ ಜಿಹಾದ್​ಗೆ ಬಲಿಯಾಗದಂತೆ ದೇವರ ಮೇಲೆ ಆಣೆ ಪ್ರಮಾಣ ಮಾಡಿಸಿದರು. ಸಹಸ್ರಾರ್ಜುನ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕ್ಷತ್ರೀಯ ಸಮಾಜದವರು ಪ್ರಮಾಣವಚನ ಸ್ವೀಕಾರ ಮಾಡಿದ್ದರು, ದೇವರ ಮೇಲೆ ಪ್ರಮಾಣ ಲವ್ ಜಿಹಾದ್​​​ಗೆ ಬಲಿಯಾಗಲ್ಲವೆಂದು ಪ್ರಮಾಣ ಮಾಡಿದ್ಧಾರೆ. ಕ್ರಾಂತಿ ಸೇನಾ ಅಧ್ಯಕ್ಷ ಬಾಬು ಬಾಕಳೆ ಪ್ರಮಾಣವಚನ ಸ್ವೀಕಾರದ ವಿಡಿಯೋ ವೈರಲ್ ಮಾಡಿದ್ದಾರೆ.

ದೇಶಾದ್ಯಂತ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದರಿಂದ ಹಿಂದೂ ಹೆಣ್ಣುಮಕ್ಕಳನ್ನು ರಕ್ಷಿಸಬೇಕು ಎಂಬ ಕೂಗು ಹಿಂದು ಸಂಘಟನೆಗಳಿಂದ, ಹಿಂದುವಾದಿಗಳಿಂದ ಕೇಳಿಬರುತ್ತಿರುವ ಬೆನ್ನಲ್ಲೇ ಇದರ ತಡೆಗೆ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಹೆಲ್ಪ್‌ಲೈನ್ ಆರಂಭ ಮಾಡಲಾಗಿದೆ. ಮಂಗಳೂರಿನಲ್ಲಿ ವಿಶ್ವ ಹಿಂದು ಪರಿಷತ್‌ ಸಹಾಯವಾಣಿಯನ್ನು ಪ್ರಾರಂಭ ಮಾಡಿದ್ದು, ಲವ್ ಜಿಹಾದ್ ಮುಕ್ತ ಸಮಾಜ ನಮ್ಮ ಗುರಿ ಎಂದು ಸ್ಲೋಗನ್ ಅನ್ನು ಸಹ ಹಾಕಿಕೊಳ್ಳಲಾಗಿದೆ.

ಇದನ್ನೂ ಓದಿ: ಟ್ರಾಫಿಕ್ ಸಿಗ್ನಲ್ ಬ್ಯಾಟರಿ ಕದಿಯುತ್ತಿದ್ದ ಖತರ್ನಾಕ್‌ ಖದೀಮರು ಅರಸ್ಟ್

ಲವ್ ಜಿಹಾದ್‌ಗೆ ಬಲಿಯಾಗುತ್ತಿರುವ ಸಹೋದರಿಯರ ರಕ್ಷಣೆಗೆ “ಲವ್‌ ಜಿಹಾದ್‌ ಹೆಲ್ಪ್‌ಲೈನ್‌” ಆರಂಭ ಮಾಡಿದ್ದು, ಮೊಬೈಲ್‌ ನಂಬರ್‌: 9148658108 ಗೆ ಕರೆ ಹಾಗೂ 9591658108 ಗೆ ವಾಟ್ಸ್‌ಆ್ಯಪ್‌ನಲ್ಲಿ ಸಿಲುಕಿದವರ ಮಾಹಿತಿ ನೀಡಲು ಮನವಿ ಮಾಡಲಾಗಿದೆ.

ಅನ್ಯ ಕೋಮಿನವರ ಜತೆ ಸಂಪರ್ಕದಲ್ಲಿರುವ ಯುವತಿಯರ ಫೋಟೊ ಸಹಿತ ವಿವರಗಳನ್ನೊಳಗೊಂಡ ಮಾಹಿತಿಯನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸುವಂತೆ ಇಲ್ಲವೇ ಕರೆ ಮಾಡಿ ತಿಳಿಸುವಂತೆ ಮನವಿ ಮಾಡಲಾಗಿದೆ. ಒಂದು ವೇಳೆ ಬ್ಲ್ಯಾಕ್‌ಮೇಲ್‌ಗೆ ಒಳಗಾದವರು ಸಹ ಕರೆ ಮಾಡಿ ವಿವರಣೆ ನೀಡಬಹುದಾಗಿದ್ದು, ಗೌಪ್ಯತೆಯನ್ನು ಕಾಪಾಡುವ ಭರವಸೆ ನೀಡಲಾಗಿದೆ. ಇಮೇಲ್‌ – antilovejihadmlr@gmail.com ಗೂ ಮಾಹಿತಿ ನೀಡುವಂತೆ ಪೋಸ್ಟರ್‌ನಲ್ಲಿ ಹೇಳಲಾಗಿದೆ.

ಕೆಲವರು ಹಿಂದೂ ಧರ್ಮದ ಯುವತಿಯರನ್ನು ಮದುವೆಯಾಗಿ ಬಳಿಕ ಕೈಕೊಟ್ಟಿರುವ ಪ್ರಕರಣಗಳು ಸಹ ಕಂಡುಬಂದಿವೆ. ಹೀಗಾಗಿ ಹಿಂದೂ ಸಂಘಟನೆಗಳು ಲವ್ ಜಿಹಾದ್​ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿವೆ.

RELATED ARTICLES

Related Articles

TRENDING ARTICLES