Thursday, May 9, 2024

ದೆಹಲಿಯಲ್ಲಿ ಉಸಿರಾಡುವುದು ಕಷ್ಟ: ಸಮ-ಬೆಸ ಯೋಜನೆ ಮತ್ತೆ ಜಾರಿ

ದೆಹಲಿ: ನವದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣವು ದಿನೆದಿನ ಹೆಚ್ಚುತ್ತಲೆ ಇದೆ. ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ನವೆಂಬರ್ 13 ರಿಂದ ನವೆಂಬರ್ 20ರವರೆಗೆ ಸಮ – ಬೆಸ ವಾಹನ ಸಂಚಾರ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್‌ ಘೋಷಿಸಿದ್ದಾರೆ.

ವಾತಾವರಣದಲ್ಲಿ ವಾಯುಮಾಲಿನ್ಯ ಹೆಚ್ಚಳ ಆಗಿರೋದ್ರಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅದರಲ್ಲೂ, ಮಕ್ಕಳು, ಹಿರಿಯರು ಉಸಿರಾಡಲು ಕೂಡ ಪರದಾಡುವಂತಾಗಿದೆ, ಇದನ್ನ ಗಮನದಲ್ಲಿಟ್ಟುಕೊಂಡು ಈ ಆದೇಶವನ್ನ ಹೊರಡಿಸಲಾಗಿದೆ.

ಇದನ್ನೂ ಓದಿ: ಮಾಜಿ ಸಚಿವ ಬಿಜೆಪಿ ನಾಯಕ ಡಿ.ಬಿ.ಚಂದ್ರೇಗೌಡ ಇನ್ನಿಲ್ಲ 

ಸದ್ಯ ಈ ಸಮ-ಬೆಸ ಯೋಜನೆ ಅಡಿಯಲ್ಲಿ ಬೆಸ ಅಂಕೆಗಳಲ್ಲಿ ಕೊನೆಗೊಳ್ಳುವ ವಾಹನಗಳು ಬೆಸ ಸಂಖ್ಯೆಯ ದಿನಾಂಕದಲ್ಲಿ ಮಾತ್ರ ರಸ್ತೆಗಿಳಿಯಬೇಕು, ಮತ್ತು ಸಮ ಅಂಕೆಗಳಲ್ಲಿ ಕೊನೆಗೊಳ್ಳುವ ವಾಹನಗಳು ಸಮ ಸಂಖ್ಯೆಯ ದಿನಾಂಕಗಳಲ್ಲಿ ಮಾತ್ರ ರಸ್ತೆಗಿಳಿಯಬೇಕೆಂದು ಸಚಿವ ಗೋಪಾಲ್ ರೈ ಆದೇಶಿಸಿದ್ದಾರೆ.

RELATED ARTICLES

Related Articles

TRENDING ARTICLES