Saturday, May 4, 2024

ಸಿದ್ದರಾಮಯ್ಯ ನನ್ನ ವಿರುದ್ಧ ಎಲ್ಲೂ ಮಾತನಾಡಿಲ್ಲ : ಬಿ.ಕೆ. ಹರಿಪ್ರಸಾದ್ ಡ್ಯಾಮೇಜ್ ಕಂಟ್ರೋಲ್

ಕೋಲಾರ : ಹಿಂದುಳಿದ ವರ್ಗದವರು ಸ್ಥಾನಮಾನಕ್ಕಾಗಿ ಎಂಎಲ್​ಎ(ಶಾಸಕ) ಆಗಬೇಕು, ಎಂಪಿ(ಸಂಸದ) ಆಗಬೇಕು ಅಂತ ಒತ್ತಾಯಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗದ ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತರೋದು ತಪ್ಪಾ? ಯಾರೂ ಸಹ ಪ್ರತ್ಯೇಕವಾಗಿ ಸಭೆ ಮಾಡ್ತಿಲ್ಲ, ವರ್ಕಿಂಗ್ ಕಮಿಟಿ ಯಲ್ಲಿ ಜಾತಿ ಗಣತಿ ಬಗ್ಗೆ ರಾಹುಲ್ ಗಾಂಧಿ ಸಮ್ಮುಖದಲ್ಲಿಯೇ ತೀರ್ಮಾನವಾಗಿದ್ದು, ಅದರಂತೆಯೇ ಹಿಂದುಳಿದ ವರ್ಗಗಳ ಸಮಾವೇಶ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ನನಗೇನು ಅನ್ಯಾಯ ಆಗಿಲ್ಲ, ವರ್ಕಿಂಗ್ ಕಮಿಟಿ ಸದಸ್ಯನ ಸ್ಥಾನಕ್ಕಿಂತ ಬೇಕಾ? ಎಂದು ಪ್ರಶ್ನಿಸಿದ ಬಿ.ಕೆ.ಹರಿಪ್ರಸಾದ್ ಅವರು, ಕೆಲ ಪಟ್ಟಭದ್ರ ಹಿತಾಸಕ್ತಿ ಇರೋರು ಬೇರೆ ಪಕ್ಷದಲ್ಲಿ ಇದ್ದಾರೆ. ಹಳೆಯ ರಾಜಕೀಯ ಕಥೆಗಳಿಗೆ ನಾನು ಈಗಾಗಲೇ ಉತ್ತರ ಕೊಟ್ಟಿದ್ದು, ನನ್ನ ಹೆಸರಿಟ್ಟು ಹರಿಪ್ರಸಾದ್ ಹೇಳಿಲ್ಲ ಅಂತ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ಸಿದ್ದರಾಮಯ್ಯ ಸಹ ನನ್ನ ವಿರುದ್ಧ ಎಲ್ಲೂ ಮಾತನಾಡಿಲ್ಲ ಎಂದು ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಅನ್ಯಾಯ ಆಗಿಲ್ಲ

ಇವತ್ತು ಕೋಲಾರದಲ್ಲಿ ನಡೆದ ಸಭೆಯಲ್ಲೂ ಸಹ ನನಗೆ ಅನ್ಯಾಯ ಆಗಿದೆ ಎಂದು ಯಾರು ಹೇಳಿಲ್ಲ. ನನಗೆ ಕಾಂಗ್ರೆಸ್ ಪಕ್ಷದಲ್ಲಿ ಅನ್ಯಾಯ ಆಗಿದೆ ಎಂದು ಅನಿಸುತ್ತಿಲ್ಲ. ನಾನು ಈಗಲೂ ರಾಷ್ಟ್ರ ರಾಜಕಾರಣದಲ್ಲಿ ಇರುವ ವ್ಯಕ್ತಿ, ಹಿಂದುಳಿದ ವರ್ಗಗಳ ಸಭೆ ಮಾತ್ರ ಇದು, ಕೇವಲ ಕಾಂಗ್ರೆಸ್ ಪಕ್ಷದಲ್ಲ ಎಂದು ಹರಿಪ್ರಸಾದ್ ಹೇಳಿದ್ದಾರೆ.

RELATED ARTICLES

Related Articles

TRENDING ARTICLES