Thursday, May 9, 2024

ನಂದಿ ಬೆಟ್ಟಕ್ಕೆ ರೋಪ್​ ನಿರ್ಮಾಣ: ಸಚಿವ ಸುಧಾಕರ್ ಭೇಟಿ!

ಚಿಕ್ಕಬಳ್ಳಾಪುರ: ವಿಶ್ವಪ್ರಸಿದ್ದ ನಂದಿಗಿರಿಧಾಮಕ್ಕೆ ರೋಪ್​ವೇ ನಿರ್ಮಾಣ ಹಿನ್ನೆಲೆ ಇಂದು ನಂದಿಗಿರಿಧಾಮಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.

ನಂದಿಬೆಟ್ಟದ ತಪ್ಪಲಲ್ಲಿ ಅಧಿಕಾರಿಗಳೊಂದಿಗೆ ಸಚಿವ ಸುಧಾಕರ್ ಪರಿಶೀಲನೆ ನಡೆಸಿದ್ದಾರೆ. ಸರಿಸುಮಾರು 92 ಕೋಟಿ ರೂಪಾಯಿ ವೆಚ್ಚದಲ್ಲಿ ರೋಪ್​ವೇ ನಿರ್ಮಾಣವಾಗುತ್ತಿದ್ದು, ವಾಹನದಟ್ಟಣೆ ತಪ್ಪಿಸಲು ರೋಪ್​ವೇ ನಿರ್ಮಾಣ ಮಾಡಲಾಗುತ್ತಿದೆ.

ಇದನ್ನೂ ಓದಿ: ಸಾಲಗಾರರಿಗೆ ಬ್ಯಾಂಕ್​ ಅಥವ ಖಾಸಗಿ ಕಂಪೆನಿಗಳು ಸಂಜೆ ಕರೆ ಮಾಡುವಂತಿಲ್ಲ!

ನಂದಿ ಬೆಟ್ಟ ಪ್ರವಾಸಿಗರ ಸ್ವರ್ಗವಾಗಿದ್ದು ಈ ಬೆಟ್ಟದ ವೀಕ್ಷಣೆ ನಿತ್ಯ ಸಾವಿರಾರು ಜನರು ವಿವಿಧ ಪ್ರದೇಶಗಳಿಂದ ಆಗಮಿಸುತ್ತಾರೆ. ವಾರಾಂತ್ಯ ಶನಿವಾರ ಮತ್ತು ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಇಲ್ಲಿನ ಪ್ರಕೃತಿ ಸೌಂದರ್ಯ ಸವಿಯುತ್ತಾರೆ.

ಈ ಹಿನ್ನೆಲೆಯಲ್ಲಿ ಈ ಬೆಟ್ಟಕ್ಕೆ ರೋಪ್​ ವೇ ನಿರ್ಮಾಣ ಮಾಡುವ ಯೋಜನೆಯ ಚರ್ಚೆ ಹಲವು ವರ್ಚಗಳಿಂದ ನಡೆಯುತ್ತಿದ್ದು ಇನ್ನೂ ಸಾಕಾರವಾಗಿಲ್ಲ, ಈ ಹಿಂದಿನ ಸರ್ಕಾರಗಳು ಬೆಟ್ಟಕ್ಕೆ ಪೋಪ್​ ವೇ ನಿರ್ಮಾಣ ಮಾಡಲು ಸ್ಥಳ ಪರಿಶೀಲನೆ ನಡೆಸಿತ್ತು ಆದರೇ ಕಾಮಗಾರಿ ಆರಂಭವಾಗಿಲ್ಲ.

RELATED ARTICLES

Related Articles

TRENDING ARTICLES