Wednesday, January 22, 2025

ಶಿವಮೊಗ್ಗ ರಂಗ ದಸರಾ ಕಾರ್ಯಕ್ರಮದಲ್ಲಿ ಸಿಟ್ಟಿಗೆದ್ದ ನಟ ದೊಡ್ಡಣ್ಣ

ಶಿವಮೊಗ್ಗ : ಚಲನಚಿತ್ರ ನಟ ದೊಡ್ಡಣ್ಣ ರಂಗ ದಸರಾ ಉದ್ಘಾಟನೆಗೆ ಬಂದು ಕುವೆಂಪು ರಂಗಮಂದಿರದಲ್ಲಿ ಕೋಪಗೊಂಡ ಘಟನೆ ಇಂದು ನಡೆಯಿತು.

ಅಂದಹಾಗೆ ಕುವೆಂಪು ರಂಗಮಂದಿರದಲ್ಲಿ ಶಾಸಕರಿಗಾಗಿ ಕಾಯುತ್ತಿದ್ದ ದೊಡ್ಡಣ್ಣ, ಸ್ಥಳದಲ್ಲಿದ್ದ ಆಯೋಜಕರಿಗೆ ಇವೆಲ್ಲಾ ಕಾಗಕ್ಕನ, ಗುಬ್ಬಕ್ಕನ ಕಥೆ ಹೇಳಬೇಡ. ಹೋಗಲ್ಲೋ ರೇಣುಕಾ ಎಂದು ಕಾಮಿಡಿ ಮಾಡುತ್ತಲೇ ಸಿಟ್ಟು ತೋರಿಸಿದರು.

ಅದರಂತೆ, ಸಕ್ರೆಬೈಲಿನ ಕಾರ್ಯಕ್ರಮದಲ್ಲಿದ್ದ ಶಾಸಕ ಚನ್ನಬಸಪ್ಪ ಅವರಿಗೆ ದೊಡ್ಡಣ್ಣನವರ ಫೋನ್ ರಿಸೀವ್ ಮಾಡಲು ಆಗಿರಲಿಲ್ಲ. ಇದರಿಂದ ಕ್ಷಣ ಕಾಲ ಸಿಟ್ಟಿಗೆದ್ದ ದೊಡ್ಡಣ್ಣ ಅದೆಲ್ಲ ನನಗೆ ಗೊತ್ತಿಲ್ಲ. ಶಾಸಕರು ಈ ಕೂಡಲೇ ಬರಬೇಕು. ನಾವೇಕೆ ಬಂದಿದ್ದೇವೆ ಎಂದು ಸಿಡುಕಿದರು.

ಅಲ್ಲಿದ್ದವರು ನಟ ದೊಡ್ಡಣ್ಣ ಅವರನ್ನು ಸಮಾಧಾನ ಪಡಿಸಿ ವೇದಿಕೆಗೆ ಕರೆದೊಯ್ದರು. ಅಷ್ಟರಲ್ಲಿ ಶಾಸಕ ಚನ್ನಬಸಪ್ಪ ಅವರು ವೇದಿಕೆಗೆ ಆಗಮಿಸಿದ್ದರು. ಅವರನ್ನು ಕಂಡ ದೊಡ್ಡಣ್ಣರ ಕೋಪ ಶಾಂತವಾಗಿ, ಶಾಸಕರು ಬಂದಿದ್ದಾರೆ, ಅವರಿಗೆ ಅಭಿನಂದನೆ. ಅವರು ನೂರು ವರ್ಷ ಚೆನ್ನಾಗಿರಲಿ ಎಂದು ಹಾರೈಸಿದರು.

RELATED ARTICLES

Related Articles

TRENDING ARTICLES