Thursday, May 2, 2024

ನಿದ್ರೆಗೆ ಜಾರಿದ ಖಾಕಿ..! ರಾತ್ರೋ ರಾತ್ರಿ ಬೆಂಗಳೂರಿನಲ್ಲಿ ಬಸ್ ನಿಲ್ದಾಣ ಕದ್ದ ಕಳ್ಳರು

ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಒಂದು ನಿಮಿಷ ಎಚ್ಚರ ತಪ್ಪಿದ್ರೆ ಎಲ್ಲವೂ ಮಾಯಾ. ಇಷ್ಟು ದಿನ ಬರೀ ಜನರ ಪರ್ಸು, ಚೈನು, ಹಣ, ಬೈಕ್, ಕಾರ್​ಗಳಿಗೆ ಸ್ಕೆಚ್ ಹಾಕ್ತ ಇದ್ದ ಕಳ್ಳರು ಇವಾಗ ಒಂದ್ ಸ್ಟೆಪ್ ಮುಂದೆ ಹೋಗಿ ಬಸ್ಟಾಂಡ್ ಅನ್ನೇ ಎಗ್ಗರಿಸಿದ್ದಾರೆ.

ಮಾಯಾನಗರಿ ಬೆಂಗಳೂರಿನಲ್ಲಿ ಯಾಮಾರಿದ್ರೆ ಎಲ್ಲವೂ ಕ್ಷಣಾರ್ಧದಲ್ಲಿ ಮಾಯಾವಾಗಿ ಬಿಡುತ್ತೆ. ಇದಕ್ಕೆ ತಕ್ಕಂತೆ ಕಳ್ಳರು ಎಲ್ಲವನ್ನೂ ಬಿಟ್ಟು ಬರೋಬ್ಬರಿ 10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಬಸ್ಟಾಂಡ್ ಅನ್ನೇ ಕದಿದ್ದಾರಂತೆ!

ಪೋಲಿಸ್ ಕಮಿಷನರ್ ಕಚೇರಿ ಹಿಂಭಾಗದಲ್ಲಿ ಪಾಲಿಕೆಯಿಂದ ನಿರ್ಮಿಸಲಾಗಿದ್ದ, ಬಸ್ ನಿಲ್ದಾಣ ರಾತ್ರೋ ರಾತ್ರಿ ನಾಪತ್ತೆಯಾಗಿದೆ. ಕನ್ನಿಂಗ್ ಹ್ಯಾಮ್ ರಸ್ತೆಯ ಬಳಿ ಇರೋ ಕೆಫೆ ಕಾಫಿ ಡೇ ಮುಂಬಾಗದಲ್ಲಿ ಪಾಲಿಕೆ ಆಗಸ್ಟ್ 21 ರಂದು ಬಸ್ ನಿಲ್ದಾಣವನ್ನ ನಿರ್ಮಿಸಿತ್ತು. ಹೆಚ್ಚಾಗಿ ಜನರ ಸಂಚಾರ ಇರುವ ಕಾರಣ ಹಾಗೂ ಅಧಿಕ ಬಸ್‌ಗಳು ಓಡಾಡೋ ಕಾರಣ ಇಲ್ಲಿ ಎರಡು ಸ್ಟೀಲ್ ಬಸ್ಟಾಂಡ್‌ಗಳಿದ್ದವು. ಎರಡರಲ್ಲಿ ಒಂದು ಬಸ್ಟಾಂಡ್ ಇದೀಗ ನಾಪತ್ತೆಯಾಗಿದೆ.

ಪೋಲಿಸ್ ಇಲಾಖೆ ನಿದ್ದೆ ಮಾಡ್ತಿದ್ಯಾ?

ಇನ್ನೂ, ಕಳ್ಳರ ಕೈಚಳಕಕ್ಕೆ ಸ್ಥಳೀಯ ನಿವಾಸಿಗಳು ಶಾಕ್ ಆಗಿದ್ದಾರೆ. ಇಷ್ಟು ಬ್ಯೂಸಿಯಾಗಿರೋ ರೋಡ್​ನಲ್ಲಿ ಬಸ್ಟಾಂಡ್ ಮಾಯಾವಾಗಿದೆ ಅಂದ್ರೆ ಪೋಲಿಸ್ ಇಲಾಖೆ ನಿದ್ದೆ ಮಾಡ್ತಿದ್ಯಾ? ಪಾಲಿಕೆ ಅಧಿಕಾರಿಗಳು ಏನ್ ಮಾಡ್ತಾ ಇದ್ದಾರೆ? ಅಂತ ಸ್ಥಳೀಯರು ಛೀಮಾರಿ ಹಾಕಿದ್ದಾರೆ.

ಒಟ್ನಲ್ಲಿ, ಇಲ್ಲಿವರೆಗೆ ಸಾರ್ವಜನಿಕ ಪ್ರದೇಶಗಳಲ್ಲಿ ಚೈನ್, ಪರ್ಸ್, ಕಳ್ಳರಿದ್ದಾರೆ ಎಚ್ಚರಿಕೆ ಅಂತ ಬೋರ್ಡ್ ಹಾಕಲಾಗ್ತಿತಿತ್ತು. ಇನ್ಮೇಲೆ ನಗರದ ಬಸ್ಟಾಂಡ್‌ಗಳ ಬಳಿ ಬಸ್ಟಾಂಡ್ ಕಳ್ಳರಿದ್ದಾರೆ ಎಚ್ಚರಿಕೆ ಅಂತ ಬೋರ್ಡ್ ಹಾಕಬೇಕಾದ ಪರಿಸ್ಥಿತಿ ಬಂದ್ರೆ ಆಶ್ಚರ್ಯವೆನಿಲ್ಲಾ.

RELATED ARTICLES

Related Articles

TRENDING ARTICLES