Sunday, May 5, 2024

ಮುಸ್ಲಿಂ ಯುವಕನ ಮೈ ಮೇಲೆ ದೈವದ ಆವಾಹನೆ : 18 ವರ್ಷದ ಬಳಿಕ ನೇಮೋತ್ಸವ

ಮಂಗಳೂರು : ದೈವಸ್ಥಾನದ ಕೆಲಸ ನಿರ್ವಹಿಸುವ ಸಂದರ್ಭ ಏಕಾಏಕಿ ಒರಿಸ್ಸಾ ಮೂಲದ ಮುಸ್ಲಿಂ ಯುವಕನಿಗೆ ದೈವ ಆವಾಹನೆ ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಮಂಗಳೂರು ಹೊರವಲಯದ ಪೆರ್ಮುದೆಯಲ್ಲಿನ ಪಿಲಿ ಚಾಮುಂಡಿ ದೇವಸ್ಥಾನದಲ್ಲಿ ಕಳೆದ 2 ತಿಂಗಳ ಹಿಂದೆ ದೈವಸ್ಥಾನಕ್ಕೆ ಸಂಬಂಧಪಟ್ಟ ತಡೆಗೋಡೆ ನಿರ್ಮಿಸುವ ಸಂದರ್ಭದಲ್ಲಿ ಒಡಿಶಾ ಮೂಲದ ಯುವಕನ ಮೈಯಲ್ಲಿ ದೈವದ ಅವಾಹನೆ ಆಗಿದೆ. ಪ್ರಶ್ನಾ ಚಿಂತನೆಯಲ್ಲಿ ಕಂಡುಕೊಂಡಾಗ ಇದು ಜಿಲ್ಲೆಯ ಪ್ರತಿಷ್ಟಿತ ಕಂಪನಿಯಾದ MRPLನಿಂದ ಬಂದ ಸಮಸ್ಯೆ ಎಂದು ತಿಳಿದುಬಂದಿದೆ.

ಕಳೆದ 3 ದಶಕಗಳ ಹಿಂದೆ ಪ್ರತಿಷ್ಠಿತ MRPL ಕಂಪನಿಗಾಗಿ ಜಮೀನು ಭೂಸ್ವಾಧೀನಗೊಂಡಿದೆ. ಆ ಸಂದರ್ಭ ಅಲ್ಲಿದ್ದ ಪಿಲಿ ಚಾಮುಂಡಿ ದೈವಸ್ಥಾನ ಹಾಗೂ ಕೊಡಮಣಿತ್ತಾಯ ದೈವಸ್ಥಾನ ಪುನರ್ವಸತಿ ಪ್ರದೇಶದಲ್ಲಿನ ಅಂದರೆ ಪೆರ್ಮುದೆ ಸೋಮನಾಥ ಧಾಮಕ್ಕೆ ಸ್ಥಳಾಂತರಗೊಂಡು ಕಾಲ ಕಾಲಕ್ಕೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿತ್ತು.

ನೇಮ ನಡೆಸಲು ಅಸಾಧ್ಯವಾಗಿತ್ತು

ಪೆರ್ಮುದೆ ಗ್ರಾಮಕ್ಕೆ ಸಂಬಂಧಿಸಿ ದೈವಗಳ 4 ಗಡು ಇದ್ದು, ಪ್ರಸುತ್ತ ಕಾಯರ್ ಕಟ್ಟೆ ಎಂಬುದು ಕುತ್ತೆತ್ತೂರು ಗ್ರಾಮದ ಪೆರ್ಮುದೆ ಗಡುವಾಗಿದೆ. ಈ ಗಡು ಸ್ಥಳದಲ್ಲಿ ನಡೆಯುತ್ತಿದ್ದ ದೈವಾರಾಧನೆ ಪ್ರಕ್ರಿಯೆಗಳು ಕಳೆದ 18 ವರ್ಷಗಳಿಂದ ಸ್ಥಗಿತಗೊಂಡಿದೆ. ಭೂಸ್ವಾಧೀನಗೊಂಡ ಮತ್ತು MRPLಗೆ ಹತ್ತಿರವಾದ ಕಾರಣ ಇಲ್ಲಿ ನೇಮ ನಡೆಸಲು ಅಸಾಧ್ಯವಾಗಿತ್ತು. ಇಲ್ಲಿನ ಭೌಗೋಳಿಕ ಸ್ಥಿತಿಗತಿಗಳೂ ಇದಕ್ಕೆ ಪ್ರಮುಖ ಕಾರಣವಾಗಿತ್ತು.

18 ವರ್ಷದ ಬಳಿಕ ದೈವಕ್ಕೆ ನೇಮೋತ್ಸವ

ಇನ್ನೂ, ಈ ವೇಳೆ ಕೇಳಿದ ದೈವ ಪ್ರಶ್ನೆಯಲ್ಲಿ ಗಡುವಾಡು ಸ್ಥಳದಲ್ಲಿ ದೈವಕ್ಕೆ ನೇಮೋತ್ಸವ ಮಾಡಲು ಸೂಚನೆ ನೀಡಲಾಗಿತ್ತು. ಸೂಚನೆಯ ಹಿನ್ನೆಲೆ 18 ವರ್ಷದ ಬಳಿಕ ಪಿಲಿಚಾಮುಂಡಿ ದೈವಕ್ಕೆ ನೇಮೋತ್ಸವ ಮಾಡಲು ಗ್ರಾಮಸ್ಥರು ಮುಂದಾಗಿದ್ದಾರೆ.

RELATED ARTICLES

Related Articles

TRENDING ARTICLES