Monday, December 23, 2024

ಅಪ್ರಾಪ್ತ ಅಕ್ಕ, ತಮ್ಮನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಯುವಕ

ಕಲಬುರಗಿ : ಅಪ್ರಾಪ್ತ ವಯಸ್ಸಿನ ಅಕ್ಕ, ತಮ್ಮನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಪಾಪಿ ಯುವಕ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚಾವರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

6 ವರ್ಷದ ಬಾಲಕ ಮತ್ತು 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಸಚಿನ್ ಚೌವ್ಹಾಣ್ (21) ಆರೋಪಿ. ಇಬ್ಬರು ಮಕ್ಕಳಿಗೆ ಚಾಕೊಲೇಟ್ ಕೊಡುವುದಾಗಿ ಹೇಳಿ ಕರೆದುಕೊಂಡು ಹೋಗಿ ಬಾಲಕಿ ಮತ್ತು ಬಾಲಕನ ಮೇಲೆ ಸಚಿನ್ ದೌರ್ಜನ್ಯ ಎಸಗಿದ್ದು, ಸೋಮವಾರ ಘಟನೆ ಬೆಳಕಿಗೆ ಬಂದಿದೆ.

ಇದನ್ನು ಓದಿ : ಶ್ರೀ ಕ್ಷೇತ್ರ ಸಿದ್ಧರಬೆಟ್ಟಕ್ಕೆ ಹರಿದು ಬಂದ ಭಕ್ತ ಸಾಗರ

ಈ ಘಟನಾ ಹಿನ್ನೆಲೆ ಆರೋಪಿ ಸಚಿನ್​ನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ ಕೊಂಚಾವರಂ ಪೋಲಿಸರು.

RELATED ARTICLES

Related Articles

TRENDING ARTICLES