Tuesday, May 21, 2024

ಮೈಸೂರು ಪಾಲಿಕೆ ಚುನಾವಣೆ: “ಕೈ” ವಶವಾಗುವಂತೆ ಕೆಲಸ ಮಾಡಿ- ಸಿಎಂ

ಬೆಂಗಳೂರು : ಮೈಸೂರು ಪಾಲಿಕೆ ಚುನಾವಣೆ ಸಂಬಂಧ ಮೈಸೂರು ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್​ ನೇತೃತ್ವದಲ್ಲಿ ಸಭೆ ನಡೆಯಿತು.

ಮೈಸೂರು ಪಾಲಿಕೆ ಚುನಾವಣೆ  ಮತ್ತು ಬಿಬಿಎಂಪಿ ಚುನಾವಣೆ ಒಂದೇ ಸಮಯದಲ್ಲಿ ನಡೆಯುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಎರಡೂ ಚುನಾವಣೆಗಳು ಮಹತ್ವದ್ದಾಗಿದ್ದು. ಬಿಬಿಎಂಪಿ ಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವುದು ಖಚಿತ. ಅದೇ ರೀತಿ ಮೈಸೂರು ಪಾಲಿಕೆಯನ್ನೂ ಗೆಲ್ಲಬೇಕು ಎನ್ನುವ ಖಚಿತ ನಿರ್ಧಾರಕ್ಕೆ ಈ ಸಭೆಯಲ್ಲಿ ಕ್ರಮ ಕೈಗೊಳ್ಳಲಾಯಿತು.

ಇದನ್ನೂ ಓದಿ: ಬಿಜೆಪಿ ಶಾಸಕರಿಗೆ ಯಾರೂ ಜೆಟ್ ರೆಡಿ ಮಾಡಿಕೊಂಡಿಲ್ಲ : ಖರ್ಗೆ ಗರಂ

ಮೈಸೂರು ಪಾಲಿಕೆ ಚುನಾವಣೆ ಹಿನ್ನೆಲೆ ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಮಂತ್ರಿಗಳೊಂದಿಗೆ ಸಮನ್ವಯತೆಯೊಂದಿಗೆ ಸರ್ಕಾರ ಮತ್ತು ಪಕ್ಷದ ಜತೆ ಕೆಲಸ ನಿರ್ವಹಿಸಬೇಕು. ಐದು ಗ್ಯಾರಂಟಿ ಯೋಜನೆಗಳನ್ನು ಮಧ್ಯಮ ಮತ್ತು ಬಡ ವರ್ಗದ ಎಲ್ಲಾ ಜಾತಿ ಸಮುದಾಯಗಳ ಮನೆ ಬಾಗಿಲಿಗೆ ತಲುಪಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಶಾಸಕರು ಮತ್ತು ಉಸ್ತುವಾರಿ ಸಚಿವರಿಗೆ ತಿಳಿಸಲಾಯಿತು.

ಇದೇ ವೇಳೆ ಮೈಸೂರು, ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸುವ ಸಂಬಂಧ ಅರ್ಥಪೂರ್ಣ ಚರ್ಚೆ ನಡೆಯಿತು.

ಈ ಸಭೆಯಲ್ಲಿ ಮೈಸೂರು ಉಸ್ತುವಾರಿ ಸಚಿವ ಹೆಚ್​.ಸಿ ಮಹದೇವಪ್ಪ, ತನ್ವೀರ್​ ಸೇಠ್​, ಸೇರಿದಂತೆ ಮೈಸೂರಿನ ಎಲ್ಲಾ ಶಾಸಕರು ಸಭೆಯಲ್ಲಿ ಹಾಕರಾಗಿದ್ದರು.

RELATED ARTICLES

Related Articles

TRENDING ARTICLES