Monday, December 23, 2024

ಟೆನಿಸ್ ಕೋಚ್ ಮೇಲೆ ಸ್ನೇಹಿತರಿಂದಲೇ ಅಟ್ಯಾಕ್

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಟೆನಿಸ್‌ ಕೋಚ್‌ ಮೇಲೆ ಸ್ನೇಹಿತರೇ ಅಟ್ಯಾಕ್ ಮಾಡಿರುವ ಘಟನೆ ಆನೇಕಲ್​​ನ ಬೆಳ್ಳಂದೂರು ಸಮೀಪದ ಹರಳೂರು ರಸ್ತೆಯಲ್ಲಿ ನಡೆದಿದೆ.

ಕ್ರಿಕೆಟ್‌ ಆಡುವಾಗ ಕಿರಿಕ್‌ ಮಾಡಿಕೊಂಡು ಹೊಡೆದಾಡಿಕೊಂಡಿದ್ದಾರೆ. ನಡುರಸ್ತೆಯಲ್ಲಿ ಸಹೋದರರಿಗೆ ಪುಂಡರು ಥಳಿಸಿದ್ದಾರೆ.

ಬಾಂಡಲಿ, ಸೌಟ್, ನೀರಿನ ಕ್ಯಾನ್‌ನಿಂದ ಥಳಿಸಿದ್ದಾರೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಜೀವನ್‌ ಜೋಯೆಲ್‌, ಜೋಸೆಫ್‌ಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಗಾಯಾಳು ಮತ್ತು ಆರೋಪಿಗಳು ಎಲ್ಲರೂ ಸ್ನೇಹಿತರಾಗಿದ್ದು, ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದಿದ್ದಾರೆ.

ಈ ಸಂಬಂಧ ಬೆಳ್ಳಂದೂರು ಠಾಣೆಯಲ್ಲಿ ಎಫ್​ಐಆರ್(FIR) ದಾಖಲಾಗಿದೆ. ಆರೋಪಿಗಳಾದ ರಮೇಶ್, ಯಶ್ವಂತ್, ಪವನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

RELATED ARTICLES

Related Articles

TRENDING ARTICLES