Wednesday, January 22, 2025

WhatsApp ಬಳಕೆದಾರರಿಗೆ ಗುಡ್ ನ್ಯೂಸ್ : ಮತ್ತೊಂದು ಹೊಸ ಫೀಚರ್

ಬೆಂಗಳೂರು : ವಾಟ್ಸ್​ಆಪ್​(WhatsApp) ಬಳಕೆದಾರರಿಗೆ ಇದು ಗುಡ್​ ನ್ಯೂಸ್. ವಾಟ್ಸ್​ಆಪ್​(WhatsApp)ನಲ್ಲಿ ಮತ್ತೊಂದು ಹೊಸ ಫೀಚರ್(ವೈಶಿಷ್ಟ್ಯ) ಲಭ್ಯವಿದೆ.

ಇನ್ನುಮುಂದೆ ಬಳಕೆದಾರರು ಒಂದೇ ಮೊಬೈಲ್​(ಫೋನ್)ನಲ್ಲಿ ಎರಡು ವಾಟ್ಸ್​ಆಪ್​ ಅಕೌಂಟ್​ಗಳನ್ನು ಬಳಸಲು ಸಾಧ್ಯವಾಗಲಿದೆ.

ವಾಟ್ಸ್​ಆಪ್​ ಖಾತೆಯಲ್ಲಿನ ಕ್ಯೂಆರ್​(QR) ಕೋಡ್​ ಆಯ್ಕೆಯಲ್ಲಿ ಬಾಣದ ಐಕಾನ್​ ಸಹಾಯದಿಂದ ಬಳಕೆದಾರರು ಇನ್ನೊಂದು ಅಕೌಂಟ್​(ಖಾತೆ) ಅನ್ನು ಸೇರಿಸಬಹುದಾಗಿದೆ.

ಇವರಿಗೆ ಮಾತ್ರ ಹೊಸ ಫೀಚರ್

ಪ್ರಸ್ತುತ ಈ ಫೀಚರ್ ವಾಟ್ಸ್​ಆಪ್​(WhatsApp) ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿರಲಿದೆ. ಶೀಘ್ರದಲ್ಲಿಯೇ ಎಲ್ಲಾ ಬಳಕೆದಾರರಿಗೂ ಈ ಫೀಚರ್ ಲಭ್ಯವಾಗಲಿದೆ.

ಜನಪ್ರಿಯ ಮೆಸೇಜಿಂಗ್ ಆಪ್ ಇಂದು ವಿವಿಧ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದೆ. ವಾಟ್ಸ್​ಆಪ್ ಸಂವಹನ ನಿರೀಕ್ಷೆಗೂ ಮೀರಿ ನಿಂತಿದೆ. ಬಳಕೆದಾರರಿಗೆ ಹೊಸ ಹೊಸ ಫೀಚರ್​ಗಳನ್ನು ಪರಿಚಯಿಸುತ್ತಿದೆ.

RELATED ARTICLES

Related Articles

TRENDING ARTICLES