Sunday, December 22, 2024

1.5 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಶಿರಸ್ತೇದಾರ್

ಶಿವಮೊಗ್ಗ : 1.5 ಲಕ್ಷ ಲಂಚ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಶಿರಸ್ತೇದಾರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಅರುಣ್ ಕುಮಾರ್ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಶಿರಸ್ತೇದಾರ್. ಶಿವಮೊಗ್ಗದ ತಾಲೂಕು ಕಚೇರಿಯಲ್ಲಿ ಶಿರಸ್ತೇದಾರರಾಗಿ ಅರುಣ್ ಕುಮಾರ್ ಕೆಲಸ ನಿರ್ವಹಿಸುತ್ತಿದ್ದರು. 1.5 ಲಕ್ಷ ರೂ. ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ವೇಳೆ ಅರುಣ್ ಕುಮಾರ್ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಇದನ್ನೂ ಓದಿ : 5 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಉಪ ತಹಶೀಲ್ದಾರ್

3 ಲಕ್ಷ ರೂ.ಗೆ ಬೇಡಿಕೆ

ಶಿವಮೊಗ್ಗದ ಹನುಮಂತ ಆರ್. ಬನ್ನಿಕೋಡ್ ಎಂಬುವವರು ತಮ್ಮ ಮನೆ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಆದರೆ, ಶಿರಸ್ತೇದಾರ ಅರುಣ್ ಕುಮಾರ್ 3 ಲಕ್ಷ ರೂ.ಗೆ ಬೇಡಿಕ ಇಟ್ಟಿದ್ದರು ಎನ್ನಲಾಗಿದೆ. ಇದನ್ನು ಅವರು ದಾಖಲೆ ಸಮೇತ ಲೋಕಾಯುಕ್ತ ಎಸ್ಪಿಯವರಿಗೆ ನೀಡಿದ್ದರು.

ಇಂದು ಒಂದುವರೆ ಲಕ್ಷ ರೂ. ಲಂಚ ನೀಡುವ ವೇಳೆ, ಲೋಕಾಯುಕ್ತ ಎಸ್.ಪಿ. ವಾಸುದೇವ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಸ್ಪಿ ತಿಳಿಸಿದ್ದಾರೆ. ದಾಳಿ ಸಂದರ್ಭದಲ್ಲಿ ಲೋಕಾಯುಕ್ತ ಡಿ.ವೈಎಸ್ಪಿ ಉಮೇಶ್ ನಾಯ್ಕ್, ನಿರೀಕ್ಷಕರುಗಳಾದ ಶಿಲ್ಪ ಹಾಗೂ ರಾಧಾಕೃಷ್ಣ ಮತ್ತು 15 ಮಂದಿ ಪೊಲೀಸ್ ಸಿಬ್ಬಂದಿ ಇದ್ದರು.

RELATED ARTICLES

Related Articles

TRENDING ARTICLES