Saturday, May 4, 2024

ವಿಪಕ್ಷ ನಾಯಕನಿಲ್ಲದೇ ಬಜೆಟ್ ಮಂಡನೆ: ರಾಜಕಿಯ ಇತಿಹಾಸದಲ್ಲಿ ಇದೇ ಮೊದಲು

ಬೆಂಗಳೂರು : ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ವಿರೋಧ ಪಕ್ಷದ ನಾಯಕನ ಆಯ್ಕೆ ನಡೆಯದೇ ಬಜೆಟ್ ಮಂಡನೆ ನಡೆಯಲಿದೆ.

ಇದನ್ನೂ ಓದಿ: Karnataka Budget 2023: ಬಜೆಟ್ ಮಂಡನೆಗೂ ಮುನ್ನ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ

ಬಜೆಟ್ ಅಧಿವೇಶನ ಆರಂಭವಾಗಿ ಐದು ದಿನಗಳು ಕಳೆದರು ವಿರೋಧ ಪಕ್ಷಕ್ಕೆ ಸಮರ್ಥ ನಾಯಕನ ಆಯ್ಕೆ ಕಗ್ಗಂಟಾಗೆ ಉಳಿದದೆ. ಇಂದಿನ ಬಜೆಟ್ ಮಂಡನೆ ಬಳಿಕ ವಿರೋಧ ಪಕ್ಷದ ನಾಯಕರಾದವರು ಬಜೆಟ್ ಸಾಧಕ ಬಾದಕಗಳ ಕುರಿತು ಸುದ್ದಿಗೋಷ್ಟಿ ಕರೆದು ಮಾತನಾಡುವುದು ವಾಡಿಕೆ.

ಆದರೇ ಅಧಿಕೃತವಾಗಿ ವಿಪಕ್ಷ ನಾಯಕನ ನೇಮಕ ಆಗುವವರೆಗೂ ಸದನದಲ್ಲಿ ಕುರ್ಚಿ ಖಾಲಿ ಇರಲಿದ್ದು ಯಾವುದೇ ರೀತಿಯ ಚರ್ಚೆ ನಡೆಸಲು ಸಾಧ್ಯವಿಲ್ಲ, ವಿಪಕ್ಷ ನಾಯಕನಿಲ್ಲದ ಕಾರಣ, ಯಾರು ಸುದ್ದಿಗೋಷ್ಟಿ ನಡೆಸ್ತಾರೆ ಎನ್ನುವುದು ಕುತೂಹಲವಾಗಿದೆ.

RELATED ARTICLES

Related Articles

TRENDING ARTICLES