Sunday, May 5, 2024

ತಪ್ಪಿದ ಭಾರೀ ದುರಂತ : ಕಂಬಿಗಳನ್ನು ಮೇಲೆತ್ತುತ್ತಿದ್ದ ಕ್ರೇನ್ ದಿಢೀರ್ ಕುಸಿತ

ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಭಾರೀ ಅನಾಹುತವೊಂದು ತಪ್ಪಿದೆ. ನಮ್ಮ ಮೆಟ್ರೋ ಕಾಮಗಾರಿ ವೇಳೆ ಕಂಬಿಗಳನ್ನು ಮೇಲೆತ್ತುತ್ತಿದ್ದ ಕ್ರೇನ್ ದಿಢೀರ್ ಕುಸಿತವಾಗಿದೆ.

ಬೆಂಗಳೂರಿನ ಮಡಿವಾಳದ ಸಿಲ್ಕ್ ಬೋರ್ಡ್ ನಲ್ಲಿ ನಡೆಯುತ್ತಿದ್ದ ಮೆಟ್ರೋ ಕಾಮಗಾರಿ ಪ್ರದೇಶದಲ್ಲಿ ಈ ಅವಘಡವಾಗಿದೆ. ಕ್ರೇನ್‌ನಲ್ಲಿದ್ದ ಕಾರ್ಮಿಕರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.             

ಮೆಟ್ರೋ ಕಾಮಗಾರಿ ಸಂದರ್ಭ ಪಿಲ್ಲರ್​ಗೆ ಹಾಕುವ ತಂತಿ ಮೇಲೆತ್ತುತ್ತಿರುವಾಗ ಏಕಾಏಕಿ ಕ್ರೇನ್​ನ ಹೈಡ್ರಾಲಿಕ್​ನಲ್ಲಿ ಸಮಸ್ಯೆ ಉಂಟಾಗಿ ಕ್ರೇನ್ ಕುಸಿದಿದೆ. ಆಗ ಕಂಬಿಗಳೆಲ್ಲ ಬಿದ್ದಿವೆ. ಈ ವೇಳೆ ಕಾರ್ಮಿಕರು ಕಡಿಮೆ ಇದ್ದ ಕಾರಣ ಭಾರೀ ಅನಾಹುತ ತಪ್ಪಿದೆ. ಕ್ರೇನ್ ರಸ್ತೆ ಮೇಲೆ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಇದನ್ನೂ ಓದಿ : ಟ್ರಕ್ ಪಲ್ಟಿ : ಓರ್ವ ಸ್ಥಳದಲ್ಲೇ ಸಾವು, ಮತ್ತೊಬ್ಬನಿಗೆ ಗಾಯ

ಘಟನಾ ಸ್ಥಳಕ್ಕೆ ಮಡಿವಾಳ ಪೊಲೀಸರು ಹಾಗೂ ಮೆಟ್ರೋ ಅಧಿಕಾರಿಗಳು ದೌಡಯಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ವಾಹನ ಸಂಚಾರ ಬದಲಾವಣೆ

ಕ್ರೇನ್ ಕುಸಿತ ಹಿನ್ನಲೆ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಡಿವಾಳ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಮಡಿವಾಳ ಪೊಲೀಸ್ ಠಾಣಾ ಜಂಕ್ಷನ್ ಗೆ ಬರುವ ಸರ್ವಿಸ್ ರಸ್ತೆಯಲ್ಲಿ ಮೆಟ್ರೋ ಕೆಲಸದ ಕ್ರೇನ್ ಬಿದ್ದಿದೆ. ಈ ಕಾರಣ ಹೆಚ್.ಎಸ್.ಆರ್ ಕಡೆಯಿಂದ ಬರುವರು 16ನೇ ಮೈನ್ ಕಡೆಯಿಂದ ಮತ್ತು 29ನೇ ಮೈನ್ ಕಡೆಯಿಂದ ಬರುವರು ಬೊಮ್ಮನಹಳ್ಳಿಗೆ ಹೋಗಿ ಹೊಸೂರು ರಸ್ತೆ ಮೂಲಕ ನಗರ ಪ್ರವೇಶಿಸಬಹುದು ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES