Thursday, May 2, 2024

ಪವರ್ ಟಿವಿ ಇಂಪ್ಯಾಕ್ಟ್​: ಮಹದೇಶ್ವರ ಬೆಟ್ಟಕ್ಕೆ ನಾಲ್ಕು ಹೊಸ ಬಸ್​ಗಳ ಸೇವೆ ಲೋಕಾರ್ಪಣೆ

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟಕ್ಕೆ ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸದೇ ಭಕ್ತರ ಜೀವದೊಟ್ಟಿಗೆ ಚೆಲ್ಲಾಟ ಆಡುತ್ತಿದ್ದ ಪ್ರಾಧಿಕಾರದ ಕುರಿತು ಪವರ್ ಟಿವಿ ವರದಿ ಮಾಡಿದ ಬೆನ್ನಲ್ಲೇ  ಎಚ್ಚೆತ್ತ ಪ್ರಾಧಿಕಾರ ನಾಲ್ಕು ಬಸ್​ಗಳಿಗೆ ಇಂದು ಚಾಲನೆ ನಿಡಿದೆ.

ಇದನ್ನೂ ಓದಿ: KGF ಮೀರಿಸೋ ತಂತ್ರಜ್ಞಾನ, 200 ಕೋಟಿ ಬಜೆಟ್ ; 4K ಐಮ್ಯಾಕ್ಸ್-ಡಾರ್ಕ್ ಸೆಂಟ್ರಿಕ್ ಥೀಮ್​ನ ಫಸ್ಟ್ ಇಂಡಿಯನ್ ಮೂವಿ ‘ಸಲಾರ್’

ರಾಜ್ಯದ ಪ್ರಮುಖ ಯಾತ್ರಸ್ಥಳವಾದ ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರದ ಆವರಣದಲ್ಲಿ ಇಂದು 4 ನೂತನ ಬಸ್​ಗಳಿಗೆ ಸಾಲೂರು ಮಠದ ಶ್ರೀಗಳು ಹಸಿರು ನಿಶಾನೆ ತೋರುವ ಮೂಲಕ ಭಕ್ತರ ಸೇವೆಗೆ ಲೋಕಾರ್ಪಣೆ ಮಾಡಿದ್ದಾರೆ.

ಕಳೆದ ಜೂನ್ 23 ರಂದು ನಮ್ಮ ಪವರ್ ಟಿವಿಯಲ್ಲಿ ಮಾಹದೇಶ್ವರ ಬೆಟ್ಟದ ರಸ್ತೆ ಮಾರ್ಗದಲ್ಲಿ ಸವೆದುಹೋದ ಬಸ್ ಟಯರ್​ಗಳು, ಸಮರ್ಪಕವಾಗಿ ನಿರ್ವಹಣೆ ಮಾಡದ ಬಸ್​ಗಳ ಮೂಲಕ ಕ್ಷೇತ್ರಕ್ಕೆ ಬರುವ ಮಾದಪ್ಪನ ಭಕ್ತರ ಜೊತೆ ಪ್ರಾಧಿಕಾರ ಚೆಲ್ಲಾಟ ಆಡುತ್ತಿರುವ ಕುರಿತು ವಿಸ್ತ್ರತವಾಗಿ ವರದಿ ಮಾಡಿತ್ತು.

ಬಸ್ ಖರೀದಿ ಮಾಡಿ 4-5 ತಿಂಗಳಾದರೂ ಸೇವೆಗೆ ನೀಡದೇ ಡಕೋಟಾ ಬಸ್ ಗಳನ್ನೇ ಓಡಿಸುತ್ತಿದ್ದರ ಸಂಬಂಧ ವರದಿ ಬಿತ್ತರಿಸಿ ಗಮನ ಸೆಳೆದಿತ್ತು. ಇದರಿಂದ ಎಚ್ಚೆತ್ತ ಪ್ರಾಧಿಕಾರ ಇದೀಗ  ಚಾಸಿ ನೆಪವೊಡ್ಡಿ ನಿಂತ್ತಿದ್ದ ಹೊಸ 4 ಬಸ್ ಗಳನ್ನು ತರಿಸಿ ಬೆಂಗಳೂರು, ಚಾಮರಾಜನಗರ ಮಾರ್ಗದಲ್ಲಿನ ಭಕ್ತರ ಓಡಾಟಕ್ಕೆ ಮುಕ್ತಗೊಳಿಸಿದೆ.

 

RELATED ARTICLES

Related Articles

TRENDING ARTICLES