Wednesday, January 22, 2025

ನದಿಯಲ್ಲಿ ನೀರು ಕುಡಿಯಲು ಹೋಗಿದ್ದ ಇಬ್ಬರು ಬಾಲಕರು ಸಾವು

ಕಲಬುರಗಿ : ನದಿಯಲ್ಲಿ ನೀರು ಕುಡಿಯಲು ಹೋಗಿದ್ದ ಇಬ್ಬರು ಬಾಲಕರು ಕಾಲು ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕೋನಾಹಿಪ್ಪರಗಿ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಕೋನಾಹಿಪ್ಪರಗಿ ಗ್ರಾಮದ ರಾಮು ದೊಡ್ಡಮನಿ (12) ಹಾಗೂ ದೇವು ಹೊಸಮನಿ (17) ಸಾವನ್ನಪ್ಪಿದ ಬಾಲಕರು.

ಕೋನಾಹಿಪ್ಪರಗಿ ಗ್ರಾಮದ ಬಳಿ ಭೀಮಾ ನದಿಗೆ ಅಡ್ಡಲಾಗಿ ಕಟ್ಟಲಾಗಿರೋ ಸೇತುವೆ ಬಳಿ ಬಾಲಕರು ನೀರು ಕುಡಿಯಲು ತೆರಳಿದ್ದರು. ಈ ವೇಳೆ ಪಾಚಿ ಮೇಲೆ ಕಾಲಿಟ್ಟು ರಾಮು ದೊಡ್ಡಮನಿ ಜಾರಿ ಬಿದ್ದಿದ್ದಾನೆ. ರಾಮುನ ರಕ್ಷಿಸಲು ಹೋಗಿ ದೇವು ಹೊಸಮನಿ ಎಂಬ ಬಾಲಕ ಸಹ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ : ಟಿವಿ ವಿಚಾರಕ್ಕೆ ಗಲಾಟೆ : ಬಾವಿಗೆ ಹಾರಿದ ಹೆಂಡ್ತಿ ರಕ್ಷಿಸಿಲು ಹೋದ ಗಂಡನೂ ಸಾವು

ಈ ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಇಬ್ಬರು ಬಾಲಕರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈಜಲು ತೆರಳಿದ್ದ ಯುವಕ ಸಾವು

ಈಜಲು ತೆರಳಿದ್ದ ಯುವಕ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಚಿಕ್ಕನಹಳ್ಳಿ ಗ್ರಾಮ ನಡೆದಿದೆ. ಬಳ್ಳಾರಿ ಮೂಲದ ಮೊಹಮ್ಮದ್ ತವಬ್ ರಹೀಮ್ (19) ಮೃತ ಯುವಕ. ಚಿಕ್ಕನಹಳ್ಳಿ ಬಳಿಯ ಕಲ್ಲಿನ ಕ್ವಾರಿಯಲ್ಲಿ ಮೊಹಮ್ಮದ್ ತವಬ್ ರಹೀಮ್ ತನ್ನ ಗೆಳೆಯರ ಜೊತೆ ಈಜಲು ತೆರಳಿದ್ದಾಗ ಈ ಘಟನೆ ನಡೆದಿದೆ. ಈ ಸಂಬಂಧ ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES