ಕಲಬುರಗಿ : ನೀವು ನಿಮ್ಮ ದಂಧೆ ಬಂದ್ ಮಾಡದೆ ಇದ್ದರೆ, ನಿಮ್ಮನ್ನ ಬಂದ್ ಮಾಡಬೇಕಾಗುತ್ತೆ ಎಂದು ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ಕಲಬುರಗಿಯಲ್ಲಿ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ನಡೆದ ಪೊಲೀಸ್ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳ ಸಭೆಯಲ್ಲಿ ಪೊಲೀಸರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಭೆಯಲ್ಲಿ ಕಲಬುರಗಿ ಪೊಲೀಸ್ ಕಮಿಷನರ್ ಚೇತನ್, ಎಸ್ಪಿ ಇಶಾ ಪಂತ್, ಜಿಲ್ಲಾ ಪಂಚಾಯಿತಿ ಸಿಇಓ ಭನ್ವರ್ ಸಿಂಗ್ ಮೀನಾ ಸೇರಿದಂತೆ ಅನೇಕ ಅಧಿಕಾರಿಗಳು ಭಾಗಿಯಾಗಿದ್ದರು. ಸಭೆ ಆರಂಭ ಆಗ್ತಿದ್ದಂತೆಯೆ ಪೊಲೀಸರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರಕ್ಕೆ ಶುಭ ಶಕುನವೇಕೋ ‘ಕೈ’ ಹಿಡಿದಿಲ್ಲ : ಬಿ.ವೈ ವಿಜಯೇಂದ್ರ
ರೈಡ್ ಮಾಡೋಕೆ ಯೋಗ್ಯತೆ ಇಲ್ವಾ?
ಪೊಲೀಸ್ ಕಮಿಷನರ್ ಚೇತನ್ ಕ್ರೈಂ ಬಗ್ಗೆ ಮಾಹಿತಿ ನೀಡ್ತಿದ್ದ ಹಾಗೆ ಪ್ರಿಯಾಂಕ್ ಖರ್ಗೆ ಗರಂ ಆಗಿದ್ದಾರೆ. ಜಿಲ್ಲೆಯಲ್ಲಿ ಗ್ಯಾಂಬ್ಲಿಂಗ್, ಮಟ್ಕಾ , ಕ್ರಿಕೆಟ್ ಬುಕ್ಕಿಂಗ್ ಬಿಂದಾಸ್ ಆಗಿ ನಡೆಯುತ್ತಿದೆ. ಅಕ್ರಮ ದಂಧೆಯಲ್ಲಿ ನೀವು ಶಾಮೀಲು ಆಗಿರೋದಕ್ಕೆ ಹೊರಗಡೆಯಿಂದ ಪೊಲೀಸರು ಬಂದು ರೈಡ್ ಮಾಡ್ತಾರೆ. ಬೆಳಗಾವಿಯಿಂದ ಬಂದು ಮಹಾರಾಷ್ಟ್ರದಿಂದ ಬಂದು ರೈಡ್ ಮಾಡ್ತಾರೆ. ಯಾಕೆ ನಿಮಗೆ ರೈಡ್ ಮಾಡೋದಕ್ಕೆ ಯೋಗ್ಯತೆ ಇಲ್ವಾ? ಇಲ್ಲಿ ನಡೆಯುವ ಅಕ್ರಮಗಳು ನಿಮಗೆ ಗೊತ್ತಿಲ್ಲದೆ ನಡೆಯುತ್ತಾ? ಅಂತ ಪ್ರಶ್ನೆ ಮಾಡಿದ್ದಾರೆ.
ಜೂಜು ಕೋರರು ಸಂಬಳ ಕೊಡ್ತಾರಾ?
ಕಲಬುರಗಿಯಿಂದ ಬೇರೆ ಕಡೆ ಟ್ರಾನ್ಸ್ ಫರ್ ಮಾಡಿಕೊಂಡು ಹೊದರೆ ನಡೆಯುತ್ತೆ ಅಂದ್ರೆ ಎಲ್ಲಿಯೂ ನಡೆಯೋದಿಲ್ಲ. ಕರ್ನಾಟಕದ ಯಾವ ಮೂಲೆಗೆ ಹೋದ್ರು ನಮ್ಮದೆ ಸರ್ಕಾರ ಇರೋದು. ಕರ್ನಾಟಕದಲ್ಲಿ ನಿಮ್ಮ ಸರ್ವಿಸ್ ಬಂದ್ ಮಾಡಬೇಕಾಗುತ್ತೆ. ಅಕ್ಕಿ ಸಪ್ಲೈ ಮಾಡುವವರು ಜೂಜು ಕೋರರು ನಿಮಗೆ ಸಂಬಳ ಕೊಡ್ತಾರಾ? ನಿಮ್ಮದೆ ಇಲಾಖೆಯ ಪೊಲೀಸ್ ಹೆಡ್ ಕಾನ್ಸಟೇಬಲ್ ಸಾವನ್ನಪ್ಪಿದ್ದಾರೆ. ನಿಮಗೆ ಏನು ಅನ್ನಿಸೋದಿಲ್ವಾ? ಎಂದು ಚಾಟಿ ಬೀಸಿದ್ದಾರೆ.