Thursday, May 9, 2024

ಈ ಕೆಲಸ ಮಾಡ್ರಿ ಅಂತ ಜನ ನಿಮಗೆ ವೋಟು ಹಾಕಿ ಗೆಲ್ಲಿಸಿದ್ರಾ? : ಬಿ.ವೈ ವಿಜಯೇಂದ್ರ

ಬೆಂಗಳೂರು : ಮತಾಂತರ ನಿಷೇಧ ಕಾಯ್ದೆ ಹಾಗೂ (ಎಪಿಎಂಸಿ) APMC ಕಾಯ್ದೆ ತೆಗೆಯುವ ಅನಿವಾರ್ಯ ಏನಿದೆ ಎಂದು ಬಿಜೆಪಿ ಶಾಸಕ ಬಿ.ವೈ ‌ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್​​ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ರೀತಿ ಕಾಯ್ದೆಗಳನ್ನು ವಾಪಾಸ್​ ತೆಗೆಯುವುದಕ್ಕಾಗಿ ರಾಜ್ಯದ ಜನ ನಿಮಗೆ ಮತ ಕೊಟ್ಟು ಗೆಲ್ಲಿಸಿ ಕಳಿಸಿದ್ರಾ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಸರ್ಕಾರ ಸಹಕಾರ ಕೊಡ್ತಿಲ್ಲ ಅನ್ನೋದು ಸರಿಯಲ್ಲ. ಕುಣಿಯಲಾರದವನಿಗೆ ನೆಲ ಡೊಂಕು ಅನ್ನುವಂತಾಗಿದೆ ರಾಜ್ಯ ಕಾಂಗ್ರೆಸ್​​ ಸ್ಥಿತಿ. ಸಂಪೂರ್ಣ ಬಹುಮತ ಬಂದಿದೆ ಅಂತ‌ ಹೇಗೆ ಬೇಕಾದ್ರೂ ಅಧಿಕಾರ ನಡೆಸುತ್ತೇವೆ ಅನ್ನೋದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ : ಒಡೆದು ಆಳುವ ‘ಬ್ರಿಟಿಷ್’ ಮನಸ್ಥಿತಿಯಿಂದ ಕಾಂಗ್ರೆಸಿಗರು ಹೊರ ಬರಬೇಕು : ಬಿ.ಸಿ ನಾಗೇಶ್

ಯಡಿಯೂರಪ್ಪ ಗುಡುಗಿದ್ರೆ, ವಿಧಾನಸೌಧ ನಡುಗುತ್ತಿತ್ತು

ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಧಾನಸಭೆಯಲ್ಲಿ ಒಬ್ಬರೆ ಇದ್ದಾಗ ಸದನದ ಒಳಗೆ, ಹೊರಗೆ ಹೋರಾಟ ಮಾಡಿದ್ರು. ಯಡಿಯೂರಪ್ಪ ಗುಡುಗಿದ್ರೆ, ವಿಧಾನಸೌಧ ನಡುಗುತ್ತೆ ಅನ್ನುವಂತೆ ಮಾಡಿದ್ರು ಎಂದು ತಮ್ಮ ತಂದೆಯನ್ನು ಬಿ.ವೈ ವಿಜಯೇಂದ್ರ ಹೊಗಳಿದ್ದಾರೆ.

ಇನ್ನು ನೀವು ಕೊಟ್ಟ ಭರವಸೆ ಈಡೇರಿಸಬೇಕು. ವಿಪಕ್ಷವಾಗಿ ನಾವು ಸುಮ್ಮನೆ ಕೂರಲ್ಲ. ಚಲುವರಾಯಸ್ವಾಮಿ ಹೇಳಿದ್ರಲ್ಲ ಇದೆಲ್ಲಾ ಗಿಮಿಕ್ ಅಂತ, ಅದನ್ನು ಒಪ್ಪಿಕೊಳ್ಳಿ. ಚುನಾವಣೆಯಲ್ಲಿ ಅಧಿಕಾರಕ್ಕೆ ಬರಲು ಈ ರೀತಿ ಮಾಡಿದೆವು ಅಂತ‌ ಒಪ್ಪಿಕೊಳ್ಳಿ. ಇಲ್ಲ ರಾಜ್ಯದ ಜನರ ಮುಂದೆ ಕ್ಷಮೆ ಕೇಳಿ ಎಂದು ಆಗ್ರಹಿಸಿದ್ದಾರೆ.

RELATED ARTICLES

Related Articles

TRENDING ARTICLES