Monday, January 20, 2025

ಗುಡ್ ನ್ಯೂಸ್ : ವಾಟ್ಸ್​ಆ್ಯಪ್​ನಲ್ಲಿ ಸೆಂಡ್ ಮಾಡಿದ ಮೆಸೇಜ್ ಎಡಿಟ್ ಮಾಡಬಹುದು : ಬಂದಿದೆ ಹೊಸ ಫ್ಯೂಚರ್

ಬೆಂಗಳೂರು: ಸಾಮಾನ್ಯವಾಗಿ ನಾವು ವಾಟ್ಸ್​ಆ್ಯಪ್​ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಡಿಲೀಟ್ ಮಾಡಬಹುದು ಆದರೆ, ಎಡಿಟ್ ಮಾಡಲು ಸಾಧ್ಯವಾಗುತ್ತಿಲ್ಲ. ಆದರೀಗ ಮೆಟಾ ಒಡೆತನದ ಈ ಆ್ಯಪ್ ”ಎಡಿಟ್ ಸೆಂಟ್ ಮೆಸೇಜ್” (Edit Sent Message) ಎಂಬ ನೂತನ ಅಪ್ಡೇಟ್ ಪರಿಚಯಿಸಿದೆ.

ಹೌದು, ವಿಶ್ವದಲ್ಲಿ ಇಂದು ಅತಿ ಹೆಚ್ಚು ಜನರು ಉಪಯೋಗಿಸುತ್ತಿರುವ ನಂಬರ್ ಒನ್ ಅಪ್ಲಿಕೇಷನ್ ವಾಟ್ಸ್​ಆ್ಯಪ್. ಈ ಆ್ಯಪ್​ಗೆ ಕೇವಲ ಭಾರತದಲ್ಲೇ ಸುಮಾರು 550 ಮಿಲಿಯನ್ ಬಳಕೆದಾರರಿದ್ದಾರೆ. ಸಾಲು ಸಾಲು ಫೀಚರ್​ಗಳನ್ನು ಪರಿಚಯಿಸುತ್ತಿದ್ದ ಮೆಟಾ ಇದೀಗ ಹೊಸ ಫ್ಯೂಚರ್​ನ್ನು ಪರಿಚಯಿಸಿದ್ದು ಇದರಲ್ಲಿ ನಾವು ಮೆಸೇಜ್​​ ಸೇಡ್​ ಮಾಡಿ ಅದನ್ನು ಎಡಿಟ್​ ಮಾಡಬಹುದು.

ಇನ್ನೂ ಈ ಬಗ್ಗೆ ಮೆಟಾ ಸಿಇಒ ಮಾರ್ಕ್ ಜುಕರ್ ಬರ್ಗ್ ತಮ್ಮ ಫೇಸ್​ಬುಕ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನೂ ಅವರು ಫೇಸ್​ ಬುಕ್​ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ಎಡಿಟ್ ಸೆಂಟ್ ಮೆಸೇಜ್ ಆಯ್ಕೆಯ ಮೂಲಕ ಕಳುಹಿಸದ  ನಾವು ಮೆಸೇಜ್ ಅನ್ನು ಎಡಿಟ್ (Edit Message) ಮಾಡಬಹುದಾಗಿದೆ. ಇದರ ಮೂಲಕ ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ. ಆದರೆ, ಇದಕ್ಕೆ 15 ನಿಮಿಷಗಳ ಕಾಲವಕಾಶ ಮಾತ್ರ ಇರುತ್ತದೆ ಎಂದು ಪೋಸ್ಟ್​ ಮಾಡಿದ್ದಾರೆ.

 

RELATED ARTICLES

Related Articles

TRENDING ARTICLES