Tuesday, May 21, 2024

ನೋಟ್ ಬ್ಯಾನ್ : ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಗಂಭೀರ ಪ್ರಶ್ನೆ

ಬೆಂಗಳೂರು : 2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊಂಡಿರುವ ಕುರಿತು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಇದು ತಮ್ಮ ವೈಫಲ್ಯಗಳಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿಯ ಹತಾಶ ಪ್ರಯತ್ನವಾಗಿದೆ ಎಂದು ಕುಟುಕಿದ್ದಾರೆ.

ಇದು ನರೇಂದ್ರ ಮೋದಿಯವರಿಂದ ಮತ್ತೊಂದು ನೋಟ್ ಬ್ಯಾನ್. ಬಿಜೆಪಿ ಸರ್ಕಾರಕ್ಕೆ ತಮ್ಮದೇ ನೀತಿಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು ವಿಷಾದಕರ. 2,000 ರೂ. ನೋಟುಗಳನ್ನು ಬ್ಯಾನ್‌ ಮಾಡುವ ಉದ್ದೇಶವಿದ್ದರೆ 2016ರಲ್ಲಿ ಅದನ್ನು ಏಕೆ ಚಲಾವಣೆಗೆ ತಂದರು? ಎಂದು ಪ್ರಧಾನಿ ಮೋದಿಗೆ ಪ್ರಶ್ನೆ ಮಾಡಿದ್ದಾರೆ.

ಕಪ್ಪು ಹಣವನ್ನು ನಿಯಂತ್ರಿಸುವ ನೋಟು ನಿಷೇಧ ಎಂಬ ಪ್ರಬಲ ಅಸ್ತ್ರವನ್ನು ಮೋದಿಯವರು ರಾಜಕೀಯ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಈಗ ರೂ.2000 ಮೌಲ್ಯದ ನೋಟುಗಳನ್ನು ನಿಷೇಧ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, 2016ರಲ್ಲಿ ರೂ.500 ಮತ್ತು ರೂ.1000 ನೋಟುಗಳನ್ನು ನಿಷೇಧ ಮಾಡಿದಾಗ ತಿಳಿಸಿದ್ದ ಯಾವ ಉದ್ದೇಶಗಳು ಈಡೇರಿವೆ ಎನ್ನುವುದನ್ನು ದೇಶದ ಜನರಿಗೆ ಮೊದಲು ತಿಳಿಸಬೇಕು ಎಂದು ಸಿದ್ದರಾಮಯ್ಯ ಛೇಡಿಸಿದ್ದಾರೆ.

ಇದನ್ನೂ ಓದಿ : ಕರ್ನಾಟಕ ಬಳಿಕ ‘ಮಧ್ಯಪ್ರದೇಶದಲ್ಲೂ ಉಚಿತ ವಿದ್ಯುತ್’ ಘೋಷಣೆ

ಸೆಪ್ಟೆಂಬರ್ 30ರ ಬಳಿಕ ಬ್ಯಾನ್?

2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ತೆಗೆದುಹಾಕಲಾಗುತ್ತಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ತಿಳಿಸಿದೆ. ಮೇ 23 ರಿಂದ ಸೆಪ್ಟೆಂಬರ್ 30 ರವರೆಗೆ ಜನರು ತಮ್ಮ ಬಳಿಯಿರುವ 2000 ರೂಪಾಯಿ ನೋಟುಗಳನ್ನು ಬ್ಯಾಂಕ್‌ ಗಳಲ್ಲಿ ಬದಲಾಯಿಸಬಹುದು ಹಾಗೂ ಠೇವಣಿ ಇಡಬಹುದು. ಗ್ರಾಹಕರು ಒಮ್ಮೆ ಗರಿಷ್ಠ 20 ಸಾವಿರ ರೂ.ವರೆಗೆ ಠೇವಣಿ ಇಡಬಹುದು ಎಂದು ಆರ್‌ಬಿಐ ಹೇಳಿದೆ.

ನೋಟ್ ಬ್ಯಾನ್ ಬಗ್ಗೆ ಜನ ಏನಂದ್ರು?

ಇನ್ನೂ, 2,000 ರೂಪಾಯಿ ನೋಟು ಬ್ಯಾನ್ ಬಗ್ಗೆ ಸಾರ್ವಜನಿಕರು ಪ್ರತಿಕ್ರಿಯಿಸಿದ್ದು, ಕೆಲವರು ನಾವು ವರ್ಷದಿಂದ 2 ಸಾವಿರ ರೂ. ಮುಖಬೆಲೆಯ ನೋಟನ್ನೇ ನೋಡಿಲ್ಲ. ನಮ್ಮ ಬಳಿ ಆ ನೋಟು ಇಲ್ಲ. ಯಾರು ನೋಟ್ ಬ್ಯಾನ್ ಮಾಡಿದ್ರು ಎಂದು ಹೇಳಿದ್ದಾರೆ. ಇನ್ನೂ ಕೆಲವರು ನೋಟ್ ಬ್ಯಾನ್ ಮಾಡಿದ್ದು ಒಳ್ಳೆಯದು ಎಂದು ಪ್ರತಿಕ್ರಿಯಿಸಿದ್ದಾರೆ.

RELATED ARTICLES

Related Articles

TRENDING ARTICLES