Thursday, May 9, 2024

ಸಿಎಂ ಯೋಗಿ ಕಮಾಲ್ : ಉತ್ತರ ಪ್ರದೇಶದಲ್ಲಿ 17ಕ್ಕೆ 17 ಗೆದ್ದ ಬಿಜೆಪಿ

ಬೆಂಗಳೂರು : ಉತ್ತರ ಪ್ರದೇಶ ನಗರ ಪಾಲಿಕೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮತ್ತೆ ಕಮಾಲ್ ಮಾಡಿದ್ದಾರೆ. ಆಡಳಿತರೂಢ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದೆ.

ಉತ್ತರ ಪ್ರದೇಶದ 17 ಮಹಾನಗರ ಪಾಲಿಕೆಗಳಿಗೆ ನಡೆದಿದ್ದ ಚುನಾವಣಾ ಫಲಿತಾಂಶವು ನಿನ್ನೆ ಹೊರಬಿದ್ದಿದ್ದು,  ಬಿಜೆಪಿ ಹದಿನೇಳರಲ್ಲೂ ಅಧಿಕಾರ ಹಿಡಿದಿದೆ.

2017ರಲ್ಲಿ ಬಿಜೆಪಿ 16 ಸ್ಥಾನಗಳ ಪೈಕಿ 14 ಸ್ಥಾನ ಗಳಿಸಿ ಪಾಲಿಕೆಗಳಲ್ಲಿ ಅಧಿಕಾರ ಹಿಡಿದಿತ್ತು. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನಂತರ ಸಮಾಜವಾದಿ ಪಾರ್ಟಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಇದಲ್ಲದೆ ಛಂಬೆ ಮತ್ತು ಸುಯಾ‌ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳಲ್ಲಿ ಬಿಎಸ್ಪಿ ಅಭ್ಯರ್ಥಿಗಳನ್ನು ಬಿಜೆಪಿ ಮೈತ್ರಿ ಪಕ್ಷ ಅಪ್ನಾ ದಳ್ ಮಣಿಸಿದೆ.

ಇದನ್ನೂ ಓದಿ : ತುಮಕೂರು ‘ಕಬ್ಜ’ ಮಾಡಿದ ಕಾಂಗ್ರೆಸ್ : ಬಿಜೆಪಿ, ಜೆಡಿಎಸ್ ಛಿದ್ರ.. ಛಿದ್ರ..

19 ಮಂದಿ ಅವಿರೋಧ ಆಯ್ಕೆ

ಈ ಪೈಕಿ 19 ಕಾರ್ಪೊರೇಟರ್‌ಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಗರ ಪಾಲಿಕೆ ಪರಿಷತ್ತಿನ 198 ಅಧ್ಯಕ್ಷರು, 5,260 ಸದಸ್ಯರನ್ನು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಯ್ಕೆ ಮಾಡಲಾಗುತ್ತದೆ.

ನಗರ ಪಂಚಾಯಿತಿಗಳಿಗೆ 542 ಅಧ್ಯಕ್ಷರು ಹಾಗೂ 7,104 ಸದಸ್ಯರ ಭವಿಷ್ಯ ಇಂದೇ ನಿರ್ಧಾರ ಆಗುತ್ತಿದೆ. ಒಟ್ಟು 14,522 ಸ್ಥಾನಗಳಿಗೆ 83,378 ಅಭ್ಯರ್ಥಿಗಳ ಕಣದಲ್ಲಿದ್ದಾರೆ.

RELATED ARTICLES

Related Articles

TRENDING ARTICLES