Wednesday, May 22, 2024

ವಿಧಾನಸಭಾ ಚುನಾವಣೆ : ನಿಮ್ಮ ಜಿಲ್ಲೆಯಲ್ಲಿ ಸಿಕ್ಕ ನಗದು, ಮದ್ಯ ಎಷ್ಟು ಗೊತ್ತಾ?

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸ್ ಅಧಿಕಾರಿಗಳು ಹಾಗೂ ಅಬಕಾರಿ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಬರೋಬ್ಬರಿ 145 ಕೋಟಿ ನಗದು, 375 ಕೋಟಿ ಮೌಲ್ಯದ ವಸ್ತುಗಳು ಜಪ್ತಿ ಮಾಡಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪೊಲೀಸರ ಮೆಗಾಬೇಟೆ ನಡೆದಿದೆ. ಮದ್ಯ, ಬೆಳ್ಳಿ, ಬಂಗಾರ, ಕುಕ್ಕರ್ ಸೇರಿ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. 145.46 ಕೋಟಿ ರೂ. ನಗದು ಜಪ್ತಿ ಮಾಡಿದ್ದಾರೆ. 83.66 ಕೋಟಿ ರೂ. ಮೌಲ್ಯದ ಮದ್ಯ ವಶಕ್ಕೆ ಪಡೆದಿದ್ದಾರೆ.

33.66 ಕೋಟಿ ರೂ. ಮೌಲ್ಯದ ಡ್ರಗ್ಸ್, 96.59 ಕೋಟಿ ರೂ. ಮೌಲ್ಯದ ಚಿನ್ನಾಭರಣ ಹಾಗೂ ಮತದಾರರಿಗೆ ನೀಡಲು ಸಂಗ್ರಹಿಸಿದ್ದ ಗಿಫ್ಟ್ ಹಾಗೂ ಇನ್ನಿತರ ವಸ್ತುಗಳನ್ನು ಖಾಕಿ ಪಡೆ ವಶಕ್ಕೆ ಪಡೆಸಿದ್ದಾರೆ.

ಶಿವಮೊಗ್ಗದಲ್ಲಿ ಸಿಕ್ಕಿದ್ದೇನು?

13 ಕೋಟಿ ನಗದು

95 ಸಾವಿರ ಲೀಟರ್​ ಮದ್ಯ

9 ಕೆ.ಜಿ ಚಿನ್ನಾಭರಣ

ಬಾಗಲಕೋಟೆ

10.61 ಕೋಟಿ ನಗದು

29 ಸಾವಿರ ಲೀಟರ್ ಲಿಕ್ಕರ್ ಜಪ್ತಿ

46.38 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ

1.47 ಕೋಟಿ ಮೌಲ್ಯ ಗಿಫ್ಟ್ ಐಟಮ್ಸ್

ಬೀದರ್

9.82 ಕೋಟಿ ನಗದು

72 ಸಾವಿರ ಲೀಟರ್​ ಮದ್ಯ

1 ಕೋಟಿ ಮೌಲ್ಯದ ಬೆಳ್ಳಿ ಕಾಯಿನ್ಸ್

ಇದನ್ನೂ ಓದಿ : ಹಿರಿಯೂರು ಜೆಡಿಎಸ್ ಅಭ್ಯರ್ಥಿ ಪತ್ನಿ ED ವಶಕ್ಕೆ

ಕೋಲಾರ

5.40 ಕೋಟಿ ನಗದು

96.86 ಲಕ್ಷ ಮೌಲ್ಯದ ಮದ್ಯ

2.34 ಕೋಟಿ ಮೌಲ್ಯದ ಗಿಫ್ಟ್ ಐಟಮ್ಸ್​

ಕೊಪ್ಪಳ

3.91 ಕೋಟಿ ನಗದು

7.40 ಲಕ್ಷ ಮೌಲ್ಯದ ಮದ್ಯ

1.24 ಲಕ್ಷ ಮೌಲ್ಯದ ಚಿನ್ನಾಭರಣ

ಮಂಡ್ಯ

3.48 ಕೋಟಿ ನಗದು

2.35 ಲಕ್ಷದ ಮೌಲ್ಯದ ಮದ್ಯ

ಬಳ್ಳಾರಿ

1.33 ಕೋಟಿ ನಗದು

54 ಲಕ್ಷ ಮೌಲ್ಯದ ಮದ್ಯ

33 ಲಕ್ಷ ಮೌಲ್ಯದ ಚಿನ್ನಾಭರಣ

ವಿಜಯನಗರ

1.5 ಕೋಟಿ ನಗದು

3.5 ಕೋಟಿ ಮೌಲ್ಯದ ಮದ್ಯ

5.5 ಕೋಟಿ ಮೌಲ್ಯದ ಚಿನ್ನಾಭರಣ

ವಿಜಯಪುರ

2.03 ಕೋಟಿ ನಗದು

45.59 ಲಕ್ಷ ಮೌಲ್ಯದ ಮದ್ಯ

RELATED ARTICLES

Related Articles

TRENDING ARTICLES