Thursday, May 9, 2024

ರಾಜರಾಜೇಶ್ವರಿನಗರ ‘ಕುಸ್ತಿ ಮಾಡುವ ಅಖಾಡವಲ್ಲ’ : ಡಿಕೆಸುಗೆ ಮುನಿರತ್ನ ಟಕ್ಕರ್

ಬೆಂಗಳೂರು : ಸಚಿವ ಹಾಗೂ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಅವರು ಇಂದು ಜಾಲಹಳ್ಳಿಯ ವಿವಿಧ ಬಡಾವಣೆಗಳಲ್ಲಿ ಮತಯಾಚನೆ ಮಾಡಿದರು.

ಸಾಮಾನ್ಯ ಪ್ರಚಾರದ ವಿಧಾನವನ್ನು ಕೈ ಬಿಟ್ಟು, ದ್ವಿಚಕ್ರವಾಹನದಲ್ಲಿ ಹೊರಟ ಮುನಿರತ್ನ, ಜಾಲಹಳ್ಳಿಯ ಸಣ್ಣ ಸಣ್ಣ ಗಲ್ಲಿಗಳನ್ನೂ ಬಿಡದೆ ಪ್ರಚಾರ ಕೈಗೊಂಡರು. ಅಷ್ಟೇ ಅಲ್ಲ, ಪ್ರತಿಯೊಂದು ಬೀದಿಯಲ್ಲು ಮನೆ ಮನೆಗೆ ಹೋಗಿ, ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ, ಅವರ ಕಷ್ಟ ಸುಖ ವಿಚಾರಿಸಿಕೊಳ್ಳುವ ಮೂಲಕ ಮತದಾರರ ಮನಗೆಲ್ಲುವ ಪ್ರಯತ್ನ ಮಾಡಿದರು.

ಪ್ರಚಾರದ ನಡುವೆಯೇ ಪವರ್ ಟಿವಿ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವ ಮುನಿರತ್ನ, ತಾವು ಇಲ್ಲಿಗೆ ಮತ ಭಿಕ್ಷೆ ಕೇಳೋದಕ್ಕೆ ಬಂದಿರೋದಾಗಿ ಹೇಳಿದರು. ಅಲ್ಲದೆ, ಕಾಂಗ್ರೆಸ ಕುತಂತ್ರದ ವಿರುದ್ಧ ಹರಿಹಾಯ್ದರು.

ಇದನ್ನೂ ಓದಿ : ಡಿ.ಕೆ ಸುರೇಶ್ ಮಾತನಾಡಿರುವ ಸಾವಿರ ವಿಡಿಯೋ ಇದೆ : ಮುನಿರತ್ನ

ಸಂಸದ ಡಿಕೆಸುಗೆ ಮುನಿರತ್ನ ಸವಾಲ್

ರಾಜರಾಜೇಶ್ವರಿನಗರ ಕ್ಷೇತ್ರ ಕುಸ್ತಿ ಮಾಡುವ ಅಖಾಡವಲ್ಲ. ಒಂಭತ್ತು ವರ್ಷಗಳಿಂದ ಸಂಸದರಾಗಿರುವ ಡಿ.ಕೆ.ಸುರೇಶ್, ಈಗ ಇಲ್ಲಿ ಜಾತಿ ಸಮೀಕರಣ ಮಾಡಲು ಹೊರಟಿದ್ದಾರೆ. ಆದರೆ, ಇಲ್ಲಿ ಅವರ ಸಂಸದರ ಅನುದಾನದಲ್ಲಿ ಒಂದೇ ಒಂದು ಬೋರ್ ವೆಲ್ ಹಾಕಿಸಿರುವ ಉದಾಹರಣೆ ತೋರಿಸಲಿ ಎಂದು ಸವಾಲು ಹಾಕಿದರು.

ನಿಮ್ಮ ಸೇವೆ ಮಾಡುವ ಭಾಗ್ಯ ಕಲ್ಪಿಸಿ

ಈ ಬಾರಿ ರಾಜ್ಯದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರೋದು ನಿಶ್ಚಿತ. ಅಭಿವೃದ್ಧಿಗಾಗಿಯೇ ಸದಾ ದುಡಿಯುವ, ರಾಜರಾಜೇಶ್ವರಿ ನಗರ ಮತಕ್ಷೇತ್ರದ ಮನೆಮಗನಾದ ನನಗೆ ಇನ್ನೊಂದು ಅವಕಾಶ ಕೊಟ್ಟು ನಿಮ್ಮ ಸೇವೆ ಮಾಡುವ ಭಾಗ್ಯ ಕಲ್ಪಿಸಿಕೊಡಿ ಎಂದು ಮುನಿರತ್ನ ಮನವಿ ಮಾಡಿದರು.

RELATED ARTICLES

Related Articles

TRENDING ARTICLES