Monday, December 23, 2024

ನಮಗೆ ‘ಜೇನು ಕಚ್ಚಿದ್ರೂ ಪರವಾಗಿಲ್ಲ’, ತಾಕತ್ತಿದ್ರೆ ಮೀಸಲಾತಿ ವಿರೋಧಿಸಲಿ : ‘ಕೈ’ಗೆ ಬೊಮ್ಮಾಯಿ ಸವಾಲು

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಮೀಸಲಾತಿ ವಿಷಯವನ್ನು ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ಈ ಬಗ್ಗೆ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೈ ನಾಯಕರಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಮಾತನಾಡಿದ ಸಿಎಂ ಬಸವರಾಜ್, ಕಾಂಗ್ರೆಸ್​ ನಾಯಕರಿಗೆ ನೇರವಾಗಿ ಸವಾಲು ಹಾಕುತ್ತೇನೆ. ನೇರವಾಗಿ ಬಂದು ಮೀಸಲಾತಿ ವಿರೋಧ ಮಾಡಲಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ದೀನದಲಿತರಿಗೆ ಏನು ಮಾಡಲಿಲ್ಲ. ನಮಗೆ ಜೇನು ಕಚ್ಚಿದರೂ ಪರವಾಗಿಲ್ಲ, ಹಿಂದುಳಿದ ವರ್ಗದ ಜನರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇನೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ : ಮತ್ತೆ ಬೊಮ್ಮಾಯಿಗೆ ಸಿಎಂ ಪಟ್ಟ : ಸುಳಿವು ಕೊಟ್ಟ ಜೆ.ಪಿ ನಡ್ಡಾ

ಖರ್ಗೆ ಯಾಕೆ ಸುಮ್ಮನಿದ್ದಾರೆ?

ಕಾಂಗ್ರೆಸ್ ನವರು ತಾವು ಅಧಿಕಾರಕ್ಕೆ ಬಂದರೆ ಮೀಸಲಾತಿ ರದ್ದು ಮಾಡುವುದಾಗಿ ಹೇಳುತ್ತಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಯಾಕೆ ಸುಮ್ಮನಿದ್ದಾರೆ? ಅವರಿಗೆ ಒಪ್ಪಿಗೆ ಇರುವುದರಿಂದಲೇ ಸುಮ್ಮನಿದ್ದಾರೆ ಎಂದು ಸಿಎಂ ಬೊಮ್ಮಾಯಿ ಕುಟುಕಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಜನರ ಮೂಗಿಗೆ ಕಾಂಗ್ರೆಸ್ ತುಪ್ಪ ಹಚ್ಚುವ ಕೆಲಸ ಮಾಡಿತ್ತು. ಕಾನೂನು ಕೇವಲ ಪೇಪರ್ ಮೇಲಿದ್ದರೆ ಯಾರಿಗೂ ಲಾಭವಿಲ್ಲ. ಕಾನೂನು ಜಾರಿಗೊಳಿಸುವ ಇಚ್ಛಾಶಕ್ತಿ ಸರ್ಕಾರಕ್ಕೆ ಇರಬೇಕು. ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಪರವಾಗಿ ಮಾತನಾಡುತ್ತಾರೆ. ಆದರೆ ಹಿಂದುಳಿದವರು ಹಿಂದೆ ಇದ್ದಾರೆ, ಅವರು ಮಾತ್ರ ಮುಂದೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES