Monday, December 23, 2024

ಹಳೆ ಹುಡುಗಿ ಕಾಟಕ್ಕೆ ಮನೆ ತೊರೆದ ಯುವಕ

ಕಲಬುರಗಿ : ನಿನ್ನೆ ಮದುವೆ ಆಗ್ತೇನೆ, ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಕೊಂಡು ಬಾ ಎಂದು ಕಾಡ್ತಿದ್ದ ಯುವತಿ ಕಾಟಕ್ಕೆ ಬೇಸತ್ತು ಯುವಕ ಮನೆ ಬಿಟ್ಟು ತೆರಳಿದ್ದಾನೆ. ಈ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹರವಾಳ ಗ್ರಾಮದಲ್ಲಿ ನಡೆದಿದೆ.

ಹೆಣ್ಣು ನೋಡೊಕೆ ಹೋದಾಗ ಹುಡುಗ ಇಷ್ಟವಿಲ್ಲ ಎಂದು ಮರೆಪ್ಪನನ್ನು ಯುವತಿ ತಿರಸ್ಕರಿಸಿದ್ಲು. ಬಳಿಕ ಯುವತಿ ಮತ್ತೊಂದು ಹುಡುಗಿಯನ್ನ ನೋಡಿ ಎಂಗೆಜ್ಮೆಂಟ್ ಆದ ಹುಡುಗನಿಗೆ ಕಾಟ ಕೊಡಲು ಶುರು ಮಾಡಿದ್ದಾಳೆ. ನಿನ್ನೇ ಮದುವೆ ಆಗ್ತೇನೆ, ನಿನ್ನ ಎಂಗೇಜ್ಮೆಂಟ್ ಕ್ಯಾನ್ಸಲ್ ಮಾಡಿಕೊಂಡು ಬಾ ಎಂದು ಯುವತಿ ನಿರಂತರವಾಗಿ ಕಾಡಲು ಶುರು ಮಾಡಿದ್ದಾಳೆ. ಯುವತಿಯ ಕಾಟಕ್ಕೆ ಬೇಸತ್ತು ಮರೆಪ್ಪ ಮನೆ ಬಿಟ್ಟೇ ಹೋಗಿದ್ದಾನೆ.

ಇನ್ನು, ಯವತಿಯ ಕಾಟಕ್ಕೆ ಬೇಸತ್ತ ಯುವಕ ನವೆಂಬರ್ 13 ರಂದು ಮನೆ ಬಿಟ್ಟು ತೆರಳಿದ್ದಾನೆ. ಐದು ಪುಟಗಳ ಪತ್ರ ಬರೆದು, ಮೊಬೈಲ್ ಫೋನ್ ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದಾನೆ. ಇತ್ತ ವೃದ್ಧ ತಂದೆ ತಾಯಿ ಬಿಟ್ಟು ಹೋದ ಮಗನಿಗಾಗಿ ಕಣ್ಣಿರು ಹಾಕುತ್ತಾ ಕಾಯುತ್ತಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES