Sunday, January 5, 2025

ಚಿತ್ತಾರ ಶೈಲಿಯಲ್ಲಿ ಫ್ಯಾನ್ಸ್ ಜೊತೆ ಗಣಿ ಗೋಲ್ಡನ್ ರೈಡ್

ಮೂರು ಮಂದಿ ಹೀರೋಯಿನ್ಸ್ ಜೊತೆ ಗೋಲ್ಡನ್ ಸ್ಟಾರ್ ಗಣಿ ತ್ರಿಬಲ್ ರೈಡಿಂಗ್ ಹೊರಟಿರೋದು ಎಲ್ರಿಗೂ ಗೊತ್ತೇಯಿದೆ. ಆದ್ರೆ ಫ್ಯಾನ್ಸ್ ಜೊತೆ ಗಣಿ ಬೈಕ್ ರೈಡಿಂಗ್ ಮಾಡಿರೋದು ವೆರಿ ವೆರಿ ಇಂಟರೆಸ್ಟಿಂಗ್ ಅನಿಸಿದೆ. ಸುಮಾರು 75ಕ್ಕೂ ಅಧಿಕ ಮಂದಿ ಡೈಹಾರ್ಡ್​ ಫ್ಯಾನ್ಸ್​ನ ಕೂರಿಸಿಕೊಂಡು ಕಂಠೀರವ ರೌಂಡ್ಸ್ ಹೊಡೆದಿದ್ದಾರೆ ಮಳೆ ಹುಡ್ಗ. ಅದಕ್ಕೆ ನಟೀಮಣಿಯರು ಗ್ಲಾಮ್ ಟಚ್ ಕೂಡ ನೀಡಿದ್ದಾರೆ.

  • ಡಿಫರೆಂಟ್ ಆಗಿ ಪ್ರಮೋಷನ್ಸ್ ಮಾಡಿದ ಫಿಲ್ಮ್ ಟೀಂ..!
  • ತ್ರಿಬಲ್ ರೈಡಿಂಗ್ ಹೀರೋಯಿನ್ ಸೆಲೆಕ್ಷನ್ ಯಾರದ್ದು..
  • ನವೆಂಬರ್ 25ರಿಂದ ಮಳೆ ಹುಡ್ಗ ಬಾಕ್ಸ್ ಆಫೀಸ್ ಸವಾರಿ

ಸಾಮಾನ್ಯವಾಗಿ ಸಿನಿಪ್ರಿಯರಿಗೆ ತಮ್ಮ ನೆಚ್ಚಿನ ಸ್ಟಾರ್ ನಟನನ್ನ ಹತ್ತಿರದಿಂದ ನೋಡ್ಬೇಕು ಅನ್ನೋ ಆಸೆ ಇರುತ್ತೆ. ಈಗಿನ ಟ್ರೆಂಡ್​ಗೆ ತಕ್ಕನಾಗಿ ಯೋಚಿಸೋದಾದ್ರೆ ಅವ್ರೊಟ್ಟಿಗೆ ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಅನ್ನೋ ಲೆಕ್ಕಾಚಾರದಲ್ಲಿ ಇರ್ತಾರೆ. ಆದ್ರೆ ಅವ್ರೊಟ್ಟಿಗೆ ಬೈಕ್​ನಲ್ಲಿ ಕೂತು ಒಂದು ರೌಂಡ್ ಹೋಗಿ ಬರೋದು ಅವಕಾಶ ಸಿಗುತ್ತೆ ಅಂದ್ರೆ ಯಾರು ತಾನೆ ಮಿಸ್ ಮಾಡ್ಕೋತಾರೆ ಅಲ್ವಾ..?

ಯೆಸ್.. ಅಂತಹ ಬೊಂಬಾಟ್ ಆಫರ್ ಕೊಟ್ಟಿದ್ದು ಮಾತ್ರ ಗೋಲ್ಡನ್ ಸ್ಟಾರ್ ಗಣೇಶ್. ತ್ರಿಬಲ್ ರೈಡಿಂಗ್ ಸಿನಿಮಾದ ಪ್ರಮೋಷನ್ಸ್ ವಿಚಾರ, ಕಂಠೀರವ ಸ್ಟುಡಿಯೋದಲ್ಲಿ ಆಯ್ದ ಅಭಿಮಾನಿಗಳ ಜೊತೆ ಗಣೇಶ್ ಅವ್ರು ಬೈಕ್ ರೈಡ್ ಮಾಡಿ, ಅವ್ರನ್ನ ದಿಲ್​ಖುಷ್ ಪಡಿಸಿದ್ದಾರೆ.

ಮಳೆ ಹುಡ್ಗ ಗಣಿಯ ಈ ಆಫರ್​ಗೆ ಗೋಲ್ಡನ್ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದು, ಕಂಠೀರವ ರೌಂಡ್ಸ್ ಹೊಡೆದು ವರ್ಲ್ಡ್​ ಕಪ್ ಗೆದ್ದಷ್ಟೇ ಖುಷಿಯಲ್ಲಿ ಬೀಗಿದ್ದಾರೆ. ಇನ್ನು ಗಣೇಶ್ ಅವ್ರೊಟ್ಟಿಗೆ ನಾಯಕನಟಿಯರಾದ ಅದಿತಿ ಪ್ರಭುದೇವ, ರಚನಾ ಇಂದರ್ ಹಾಗೂ ಮೇಘ ಶೆಟ್ಟಿ ಕೂಡ ಬೈಕ್ ರೈಡ್ ಮಾಡಿ ಎಲ್ಲರ ಹುಬ್ಬೇರಿಸಿದ್ರು.

ಮಹೇಶ್ ಗೌಡ ನಿರ್ದೇಶನದ ಹಾಗೂ ರಾಮ್ ಗೋಪಾಲ್ ನಿರ್ಮಾಣದ ತ್ರಿಬಲ್ ರೈಡಿಂಗ್ ಸಿನಿಮಾ ಸ್ಯಾಂಪಲ್ಸ್​ನಿಂದ ನೋಡುವ ಕುತೂಹಲ ಹೆಚ್ಚಿಸಿದೆ. ಅಲ್ಲದೆ, ಸಾತಿ ಕಾರ್ತಿಕ್ ಸಂಗೀತ ಸಂಯೋಜನೆಯ ಹಾಡುಗಳು ಮಕ್ಕಳಿಂದ ಮುದುಕರವರೆಗೆ ಕಿಕ್ ಕೊಡ್ತಿವೆ. ಯಟ್ಟ ಯಟ್ಟ ಹಾಗೂ ಟ್ವಿಂಕಲ್ ಟ್ವಿಂಕಲ್ ಸಾಂಗ್ಸ್ ಸಖತ್ ಬ್ಯೂಟಿಫುಲ್ ಆಗಿ ಮೂಡಿಬಂದಿವೆ.

ಪಕ್ಕಾ ಯೂತ್​ಫುಲ್ ಎಂಟರ್​ಟೈನರ್ ಫೀಲ್ ಕೊಡ್ತಿರೋ ಗಣೇಶ್​ರ ಈ ಸಿನಿಮಾ ಗಾಳಿಪಟ-2 ಬೆನ್ನಲ್ಲೇ ದೊಡ್ಡ ಹಿಟ್ ಆಗೋ ಸೂಚನೆ ಸಿಕ್ಕಿದೆ. ವಿಶೇಷ ಅಂದ್ರೆ, ಚಿತ್ರದಲ್ಲಿರೋ ಮೂವರೂ ನಟೀಮಣಿಯರನ್ನ ಸೆಲೆಕ್ಟ್ ಮಾಡಿರೋದು ಗೋಲ್ಡನ್ ಸ್ಟಾರ್ ಗಣಿ ಅಂತೆ. ಹೌದು.. ಶಿಲ್ಪಾ ಗಣೇಶ್​ರ ಸೂಚನೆ ಮೇರೆಗೆ ಮೇಘ ಶೆಟ್ಟಿ, ಲವ್ ಮಾಕ್ಟೇಲ್ ಬಳಿಕ ರಚನಾರನ್ನ ಖುದ್ದು ಗಣಿಯೇ ರೆಫರ್ ಮಾಡಿದ್ರಂತೆ.

ಒಟ್ಟಾರೆ ಪೈಸಾ ವಸೂಲ್ ಸಿನಿಮಾಗಳಿಂದಲೇ ಮನೆ ಮಾತಾಗಿರೋ ಗೋಲ್ಡನ್ ಸ್ಟಾರ್, ಈ ಬಾರಿ ಬಿಗ್ ಬ್ರೇಕ್ ಪಡೆಯಲಿದ್ದಾರೆ. ಮೇಕಿಂಗ್ ಸಖತ್ ರಿಚ್ ಆಗಿದ್ದು, ಬಹುತಾರಾಗಣದ ಕಥೆಯಿಂದ ಇದೇ ಶುಕ್ರವಾರ ದೊಡ್ಡ ಪರದೆ ರಂಗೇರಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES