Thursday, May 2, 2024

ರಾಜ್ಯದಲ್ಲಿ ಪರಿಭಾಷೆಯರಿಗೆ ಹೆಚ್ಚಿನ ಉದ್ಯೋಗ ಸಿಗುತ್ತಿದೆ : ನಿಖಿಲ್ ಕುಮಾರಸ್ವಾಮಿ

ಕೋಲಾರ : 50% ಮೀಸಲಾತಿಯಲ್ಲಿ ರಾಜ್ಯದವರಿಗೆ ಉದ್ಯೋಗ ಕೊಡಬೇಕು ಎಂಬ ಕಾನೂನು ತರಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿಂದು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವೆಂಬರ್ 1ನೇ ತಾರೀಖು ಕಾರ್ಯಕ್ರಮ ಆರಂಭವಾಗಬೇಕಾತ್ತು. 1994ರಲ್ಲಿ ದೇವೇಗೌಡರು ಇಲ್ಲಿಂದ ಪೂಜೆ ಮಾಡಿ ಸಿಎಂ ಆಗಿದ್ರು. ಅದೇ ಇತಿಹಾಸ 2023ರಲ್ಲಿ ಮರುಕಳಿಸುತ್ತದೆ. ಕುಮಾರಣ್ಣನವರು 5 ಪಂಚರತ್ನ ಯೋಜನೆಯನ್ನು ಇಟ್ಟುಕೊಂಡು ಜನರ ಮುಂದೆ ಹೊರಟಿದ್ದಾರೆ. ಇಡೀ ರಾಜ್ಯದಲ್ಲಿ ಸರ್ಕಾರಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದರು.

ಇನ್ನು, ಯಾರು ಕೂಡ ಯುವಕರಿಗೆ ಉದ್ಯೋಗ ಕೊಡುವ ಅವಕಾಶ ಮಾಡಿಕೊಡುತ್ತಿಲ್ಲ. ರಾಜ್ಯದ ಯುವಕರಿಗೆ ಉದ್ಯೋಗ ಕೊಡಬೇಕು ಎಂದು ಕುಮಾರಸ್ವಾಮಿ ಚಿಂತನೆ. ರಾಜ್ಯದಲ್ಲಿ ಪರಿಭಾಷೆಯರಿಗೆ ಹೆಚ್ಚಿನ ಉದ್ಯೋಗ ಸಿಗುತ್ತಿದೆ. ನಾನು ನಿಮ್ಮಲ್ಲಿ ಒಂದು ಮನವಿ ಮಾಡುತ್ತೇನೆ 50% ಮೀಸಲಾತಿಯಲ್ಲಿ ರಾಜ್ಯದವರಿಗೆ ಉದ್ಯೋಗ ಕೊಡಬೇಕು ಎಂಬ ಕಾನೂನು ತರಬೇಕು ಎಂದು ಅಭಿಪ್ರಾಯಪಟ್ಟರು.
ಅದಲ್ಲದೇ, ನಿರುದ್ಯೋಗದ ಸಮಸ್ಯೆ ರಾಜ್ಯ ಹಾಗೂ ದೇಶದಲ್ಲಿ ಕಾಣುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳು ಯುವಕರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಹೊರ ರಾಜ್ಯದ ಜನರಿಗೆ ನಮ್ಮ ರಾಜ್ಯದಲ್ಲಿ ಹೆಚ್ಚು ಅವಕಾಶ ಸಿಗುತ್ತಿವೆ. ನಮ್ಮ ರಾಜ್ಯದ ಯುವಕರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಕನ್ನಡಿಗರಿಗೆ ಶೇಕಡಾ 50 ರಷ್ಟು ಮೀಸಲಾತಿ ಕೊಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.

RELATED ARTICLES

Related Articles

TRENDING ARTICLES