Tuesday, January 7, 2025

ಮೇಟಾದ ಇಂಡಿಯಾ ಮುಖ್ಯಸ್ಥರಾಗಿ ಸಂಧ್ಯಾ ದೇವನಾಥನ್ ನೇಮಕ

ನವದೆಹಲಿ: ಫೇಸ್​ ಬುಕ್​ನ ಅಂಗಸಂಸ್ಥೆಯಾದ ಮೇಟಾಗೆ ಇಂಡಿಯಾ ಮುಖ್ಯಸ್ಥರನ್ನಾಗಿ ಸಂಧ್ಯಾ ದೇವನಾಥನ್ ಅವರನ್ನು ಇಂದು ಮೆಟಾ ಅಧಿಕೃತವಾಗಿ ನೇಮಕ ಮಾಡಿ ಪ್ರಕಟಿಸಿದೆ.

ದೇವನಾಥನ್ ಅವರು ಮೆಟಾದ ವ್ಯವಹಾರದ ದೀರ್ಘಾವಧಿಯ ಬೆಳವಣಿಗೆ ಮತ್ತು ಭಾರತಕ್ಕೆ ಬದ್ಧತೆಯನ್ನು ಬೆಂಬಲಿಸುವುದನ್ನು ಮುಂದುವರಿಸುವಾಗ ಅದರ ಪಾಲುದಾರರು ಮತ್ತು ಗ್ರಾಹಕರಿಗೆ ಸೇವೆ ಸಲ್ಲಿಸಲು ಸಂಸ್ಥೆಯ ವ್ಯಾಪಾರ ಮತ್ತು ಆದಾಯದ ಆದ್ಯತೆಗಳನ್ನು ಒಟ್ಟಿಗೆ ತರಲು ಗಮನಹರಿಸುತ್ತಾರೆ ಎಂದು ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

ಸಂಧ್ಯಾ ದೇವನಾಥನ್ ಬ್ಯಾಂಕಿಂಗ್ ಪಾವತಿಗಳು ಮತ್ತು ತಂತ್ರಜ್ಞಾನದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಿ ಜಾಗತಿಕ ವ್ಯಾಪಾರ ನಾಯಕರಾಗಿದ್ದಾರೆ. ಅವರು ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಉಲ್ಲೇಖಿಸಿರುವಂತೆ 2000 ವರ್ಷದಲ್ಲಿ ದೆಹಲಿ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್ ಸ್ಟಡೀಸ್ ಫ್ಯಾಕಲ್ಟಿಯಿಂದ ಎಂಬಿಎ ಪೂರ್ಣಗೊಳಿಸಿದರು.

RELATED ARTICLES

Related Articles

TRENDING ARTICLES