Monday, December 23, 2024

ನಿವೇಶನ ವಿಚಾರಕ್ಕೆ ಎರಡು‌ ಗುಂಪಿನ‌ ನಡುವೆ ಘರ್ಷಣೆ

ಶಿವಮೊಗ್ಗ: ನಿವೇಶನ ವಿಚಾರಕ್ಕೆ ಸಂಬಂಧಿಸಿದಂತೆ ಎರಡು‌ ಗುಂಪಿನ‌ ನಡುವೆ ಘರ್ಷಣೆ. ಶಿವಮೊಗ್ಗದ ಹಾರೋಬೆನವಳ್ಳಿ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿರುವ ಘಟನೆ.

ರಾಕೇಶ್ ಎಂಬುವವರಿಗೆ ಸೇರಿದ ಜಾಗದಲ್ಲಿ ಶೆಡ್ ನಿರ್ಮಿಸಿದ್ದ ಫೈರೋಜ್. ಫೈರೋಜ್ ಗೆ ಶೆಡ್ ತೆರವುಗೊಳಿಸುವಂತೆ ಸೂಚಿಸಿದ್ದ ರಾಕೇಶ್. ಜಾಗ ತೆರವು ಮಾಡುವ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ. ಜಾಗ ತೆರವು ಮಾಡದೇ ಐದಾರು ಹುಡುಗರನ್ನು‌ ಕರೆಸಿ ರಾಕೇಶ್ ಮೇಲೆ ಹಲ್ಲೆಗೆ ಮುಂದಾಗಿದ್ದ ಫೈರೋಜ್.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಗ್ರಾಮಸ್ಥರು. ಗ್ರಾಮಸ್ಥರು ಬರುತ್ತಿದ್ದಂತೆ ಸ್ಥಳದಿಂದ ಓಡಿ‌ ಹೋದ ಫೈರೋಜ್ ಕಡೆ ಹುಡುಗರು. ಸ್ಥಳಕ್ಕೆ ಹೊಳೆಹೊನ್ನೂರು ಠಾಣೆ ಪೊಲೀಸರು ಭೇಟಿ ಪರಿಶೀಲನೆ. ಪ್ರಕರಣ ಸಂಬಂಧ ಮೂವರು‌ ಪೊಲೀಸರ ವಶಕ್ಕೆ.
ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES