Friday, November 22, 2024

90 ನಿಮಿಷ ನಂತರ ವಾಟ್ಸಾಪ್​ ​ಮತ್ತೆ ಕಾರ್ಯಾರಂಭ.!

ಬೆಂಗಳೂರು; ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸಾಪ್​ ಇಂದು ಕೆಲವು ಗಂಟೆಗಳ ಕಾಲ ಸರ್ವರ್​ ಡೌನ್​ ಆಗಿ ಈಗ ಯತಾಸ್ಥಿತಿ ಆರಂಭವಾಗಿದೆ.

ಇಂದು ವಾಟ್ಸಾಪ್​ 12;31 ಕ್ಕೆ ವಾಟ್ಸಾಪ್ ಬಳಕೆದಾರರಿಗೆ ಮೊಬೈಲ್​ನಲ್ಲಿ ಮೇಸೆಜ್​, ವಿಡಿಯೋ ಕಾಲ್​,​ ಕಾಲಿಂಗ್​​ ಹೀಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನ ನಿಲ್ಲಿಸಿತ್ತು. ಈಗ ಮತ್ತೆ ಮಧ್ಯಾಹ್ನ 2;20 ಕ್ಕೆ ಆರಂಭವಾಗಿದೆ.

ಕರ್ನಾಟಕ ಸೇರಿದಂತೆ ಭಾರತ ಹಾಗೂ ವಿಶ್ವದಲ್ಲೆಡೆ ವಾಟ್ಸಾಪ್​ ಸರ್ವರ್​​​​ ಡೌನ್​ ಆಗಿ ಸುಮಾರು 96 ಕೋಟಿ ಬಳಕೆದಾರರು ಪರದಾಡಿದ್ದಾರೆ. ಅಮೇರಿಕಾದಲ್ಲಿ ಕೂಡ ವಾಟ್ಸಾಪ್​ ಬಳಕೆದಾರರಿಗೆ ಸಂದೇಶ ಕಳುಹಿಸುವ ಸೇವೆಯು ಸ್ಥಗಿತಗೊಂಡಿದೆ ಎಂದು ಬಿಬಿಸಿ ವರದಿ ಮಾಡಿದೆ.

ಬಳಕೆದಾರರ ಮೆಸೇಜ್ ಹೋಗುತ್ತಿದ್ದರೂ ಯಾವುದೇ ಟಿಕ್ ಬರುತ್ತಿಲ್ಲ. ಕೆಲವೆಡೆ ಮೆಸೇಜ್ ಕಳುಹಿಸಲಾಗುತ್ತಿಲ್ಲ ಎಂದು ಬಳಕೆದಾರರು ಸಾಮಾಜಿಕ ಜಾಲತಾಣಗಳಾದ ಟ್ವಿಟರ್​, ಪೇಸ್-​ಬುಕ್​ನಲ್ಲಿ ದೂರಿದ್ದರು.

RELATED ARTICLES

Related Articles

TRENDING ARTICLES