Monday, December 23, 2024

ರೈ ಅಪ್ಪು ಆ್ಯಂಬುಲೆನ್ಸ್​ ಕನಸಿಗೆ ರಾಕಿಭಾಯ್ & ಸೂರ್ಯ ಜೈ

ಅಪ್ಪು ಸ್ಮರಣಾರ್ಥ ನಡೆದ ಪುನೀತ ಪರ್ವ ಅನ್ನೋ ಒಂದೇ ಒಂದು ಕಾರ್ಯಕ್ರಮ, ಅಣ್ಣಾವ್ರ ಕಿರಿಮಗ, ದೊಡ್ಮನೆಯ ರಾಜಕುಮಾರ ಪುನೀತ್ ಅವ್ರು ಎಂತಹ ವ್ಯಕ್ತಿ ಹಾಗೂ ವ್ಯಕ್ತಿತ್ವ ಅನ್ನೋದಕ್ಕೆ ಸಾಕ್ಷಿ ಆಗಿದೆ. ಅದಕ್ಕಿಂತ ಹೆಚ್ಚಾಗಿ ಪುನೀತ ಪರ್ವದಲ್ಲಿ ನ್ಯಾಷನಲ್ ಸ್ಟಾರ್ ಯಶ್ ಹಾಗೂ ಸೂಪರ್ ಸ್ಟಾರ್ ಸೂರ್ಯ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆದ್ರು.

  • ಪ್ರಕಾಶ್ ರೈ ಪ್ರಯತ್ನಕ್ಕೆ ಸೂರ್ಯ, ಚಿರಂಜೀವಿ ಜೋಡಿಸಿದ್ರು ಕೈ
  • ಯಶೋಮಾರ್ಗದಿಂದ ಎಲ್ಲಾ ಜಿಲ್ಲೆಗಳಿಗೂ ಅಪ್ಪು ಆ್ಯಂಬುಲೆನ್ಸ್
  • ಇದು ವ್ಯಕ್ತಿಯನ್ನು ಮೀರಿದ ವ್ಯಕ್ತಿತ್ವಕ್ಕೆ ಸಿಕ್ಕ ಗೌರವ & ಅಭಿಮಾನ

ಸಕಾಲಕ್ಕೆ ಸಿಗದ ಆ್ಯಂಬುಲೆನ್ಸ್​ನಿಂದ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಇನ್ನಿಲ್ಲವಾದ್ರಾ..? ಹೀಗೊಂದು ಪ್ರಶ್ನೆ ಶ್ರೀಸಾಮಾನ್ಯರಲ್ಲಿ ಮೂಡೋದು ಸರ್ವೇ ಸಾಮಾನ್ಯ. ಬಹುಭಾಷಾ ನಟ ಪ್ರಕಾಶ್ ರೈಗೂ ಅದೇ ಸಂದೇಹ. ಹಾಗಾಗಿಯೇ ಮೈಸೂರಿನಲ್ಲಿ ಆಗಸ್ಟ್ ತಿಂಗಳಲ್ಲಿ ಅಪ್ಪು ಎಕ್ಸ್​ಪ್ರೆಸ್ ಹೆಸರಲ್ಲಿ ಪ್ರತಿ ಜಿಲ್ಲೆಗೊಂದು ಆ್ಯಂಬುಲೆನ್ಸ್ ನೀಡೋ ಮಹಾನ್ ಕಾರ್ಯಕ್ಕೆ ಕೈ ಹಾಕಿದ್ರು. ಅದಕ್ಕೆ ರಾಜಕುಮಾರ ಡೈರೆಕ್ಟರ್ ಸಂತೋಷ್ ಆನಂದ್​ರಾಮ್ ಕೂಡ ಸಾಥ್ ನೀಡಿದ್ರು.

ಅಪ್ಪು ಅನ್ನೋ ವ್ಯಕ್ತಿ ಜೊತೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿರೋ ಪ್ರಕಾಶ್ ರೈ, ಕೊನೆಗೆ ಅವ್ರ ನಟನೆಗಿಂತ ವ್ಯಕ್ತಿತ್ವಕ್ಕೇನೇ ಹೆಚ್ಚಾಗಿ ಮಾರು ಹೋದರು. ಅಂತಹ ಐಕಾನ್, ಲೆಜೆಂಡ್ ಈ ಅಪ್ಪು. ಸದಾ ಪರರಿಗಾಗಿ ಮಿಡಿಯೋ ಅವ್ರ ಮನ, ಮರೆಯಲಾಗದ ಮಗುವಿನಂತಹ ನಗು ರೈರನ್ನ ಕಾಡಿತ್ತು. ಹಾಗಾಗಿಯೇ ಸಾಮಾಜಿಕ ಕಾರ್ಯಕ್ಕೆ ಮುಂದಾದ್ರು. ನಂತ್ರ ರೈಗೆ ಸೂಪರ್ ಸ್ಟಾರ್ ಸೂರ್ಯ, ಮೆಗಾಸ್ಟಾರ್ ಚಿರಂಜೀವಿ ಕೂಡ ಕೈ ಜೋಡಿಸಿ, ಅವ್ರ ಫೌಂಡೇಷನ್​ಗಳಿಂದ ಒಂದೊಂದು ಆ್ಯಂಬುಲೆನ್ಸ್ ನೀಡಿದ್ರಂತೆ.

ಇದು ಪುನೀತ ಪರ್ವ ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ವೇದಿಕೆ ಮೇಲೆ ಮಾತನಾಡುವಾಗ ಬಹಿರಂಗವಾದ ಹಿಡನ್ ಸತ್ಯ.

ಆದ್ರೆ ಅದೇ ವೇದಿಕೆಯಲ್ಲಿ ಅದಕ್ಕೆ ಪೂರಕವಾಗಿ ಸೂರ್ಯ ಮತ್ತು ನಮ್ಮ ರಾಕಿಭಾಯ್ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆದ್ರು. ಅಪ್ಪು ಸರಳ, ಸಜ್ಜನಿಕೆಯನ್ನ ಸೂರ್ಯ ಕೊಂಡಾಡಿದ್ರೆ, ರೈ ಅವ್ರು ಕಂಡ ಅಪ್ಪು ಎಕ್ಸ್​ಪ್ರೆಸ್ ಆ್ಯಂಬುಲೆನ್ಸ್ ಕನಸನ್ನ ನನಸು ಮಾಡೋದಾಗಿ ರಾಕಿಭಾಯ್ ಯಶ್ ಹೇಳಿದ್ರು.

ಯೆಸ್.. ಕೆವಿಎನ್ ಪ್ರೊಡಕ್ಷನ್ಸ್​ನ ಕೆ. ವೆಂಕಟ್ ನಾರಾಯಣ್ ಜೊತೆಗೂಡಿ ಉಳಿದ ಎಲ್ಲಾ ಜಿಲ್ಲೆಗಳಿಗೂ ನಾನು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಡ್ತೇನೆ. ಗಂಧದಗುಡಿ ಸಿನಿಮಾ ಕೆಜಿಎಫ್ ರೆಕಾರ್ಡ್​ನ ಸಹ ಮುರಿಯಬೇಕು. ನೀವೆಲ್ಲಾ ಫ್ಯಾಮಿಲಿ ಸಮೇತ ಸಿನಿಮಾನ ನೋಡಿ ಅಂತ ಯಶ್ ಮುಕ್ತವಾಗಿ ಮಾತನಾಡಿದ್ರು.

ಪ್ರಕಾಶ್ ರೈ, ಯಶ್, ಸಾಯಿಕುಮಾರ್, ರವಿಚಂದ್ರನ್​ರ ಮಾತುಗಳು ನಿಜಕ್ಕೂ ಅರ್ಥಪೂರ್ಣವಾಗಿ ಎಲ್ಲರ ಮನ ಹೊಕ್ಕಿದವು. ಅಪ್ಪು ಅಷ್ಟರ ಮಟ್ಟಿಗೆ ಇವ್ರನ್ನ ಕಾಡಿದ್ರು. ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಅಪ್ಪು ಅಜರಾಮರ. ಅವ್ರಿಗಾಗಿ ಕನ್ನಡಿಗರು ತಮ್ಮ ಹೃದಯಗಳಲ್ಲೇ ಗುಡಿ ಕಟ್ಟಿರೋವಾಗ ಈ ಗಂಧದಗುಡಿ ಸಿನಿಮಾನ ಕಣ್ತುಂಬಿಕೊಳ್ಳಲ್ಲವೇ..? ಯೆಸ್.. ಇದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯವೂ ಹೌದು. ಆಗಲೇ ಅಪ್ಪು ಆಶಯಕ್ಕೊಂದು ಬೆಲೆ ಸಿಗಲು ಸಾಧ್ಯ. ಅಕ್ಟೋಬರ್ 28ಕ್ಕೆ 5ಜಿಗೂ ಮೀರಿದ ಸ್ಪೀಡ್​ನಲ್ಲಿ ಜಿಜಿ ಸಿಲ್ವರ್ ಸ್ಕ್ರೀನ್​ನಲ್ಲಿ ಅಬ್ಬರಿಸಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES