Wednesday, January 22, 2025

‘ವಿಕ್ರಂ ವೇದಾ’ ಮೊದಲ ದಿನದ ಕಲೆಕ್ಷನ್​ 10.58 ಕೋಟಿ.!

ಮುಂಬೈ: ಬಾಲಿವುಡ್​ ನಟ ಹೃತಿಕ್ ರೋಷನ್ ಹಾಗೂ ಸೈಫ್ ಅಲಿ ಖಾನ್ ಅಭಿನಯದ ಆಕ್ಷನ್ ಥ್ರಿಲ್ಲರ್ ಚಿತ್ರ ‘ವಿಕ್ರಂ ವೇದಾ’ ಬಿಡುಗಡೆಯಾದ ಮೊದಲ ದಿನ ಕಲೆಕ್ಷನ್​ನಲ್ಲಿ ಕೊಳ್ಳೆ ಹೊಡೆದಿದೆ.

ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಅವರು ತಮ್ಮ ಇನ್ಟಾಗ್ರಾಮ್​ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ವಿಕ್ರಮ ವೇದಾ ಸಿನಿಮಾ ಬಿಡುಗಡೆಯಾದ ಮೊದಲ ದಿನ 10.58 ಕೋಟಿ ರೂ ಗಳಿಸಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ಈ ಸಿನಿಮಾ ಮೇಲೆ ಬಾಲಿವುಡ್​ ಪಂಡಿತರು ಬಾಕ್ಸ್​​​ ಆಫೀಸ್​ ಕೊಳ್ಳೆಹೊಡೆಯುತ್ತದೆ ಎಂದು ಆಡಿಕೊಳ್ಳುತ್ತಿದ್ದರು. ಆದರೆ ನಿರೀಕ್ಷೆಗೆ ತಕ್ಕಂತೆ ಮೊದಲ ದಿನ ವಿಕ್ರಮ್ ವೇದ ಕಲೆಕ್ಷನ್​ ಒದಗಿ ಬಂದಿಲ್ಲ.

ವಿಕ್ರಮ್​ ವೇದಾ ಸಿನಿಮಾ ಮುಂಬೈನಲ್ಲಿ 3.19 ಕೋಟಿ, ದೆಹಲಿ, ಉತ್ತರ ಪ್ರದೇಶದಲ್ಲಿ 2.20 ಕೋಟಿ ರೂ ಗಳಿಸಿದೆ. ಪುಷ್ಕರ್ ಮತ್ತು ಗಾಯತ್ರಿ ನಿರ್ದೇಶನದ ಈ ಚಿತ್ರದಲ್ಲಿ ಹೃತಿಕ್ ರೋಷನ್, ಸೈಫ್ ಅಲಿ ಖಾನ್ ಮತ್ತು ರಾಧಿಕಾ ಆಪ್ಟೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ವಿಕ್ರಮ್ ವೇದ’ ತಮಿಳು ಚಿತ್ರದಿಂದ ಹಿಂದಿ ರಿಮೇಕ್ ಸಿನಿಮಾವಾಗಿದೆ.

RELATED ARTICLES

Related Articles

TRENDING ARTICLES