ಬೆಂಗಳೂರು : ಬಡವರು, ಮಧ್ಯಮ ವರ್ಗದವರೇನ BBMP ಅಧಿಕಾರಿಗಳ ಟಾರ್ಗೆಟ್ ಆಗಿದ್ದು, ಹಾಗಾದ್ರೆ ಶ್ರೀಮಂತರ ಮನೆಗಳಿಗೆ ಬುಲ್ಡೋಜರ್ ನುಗ್ಗೋದು ಯಾವಾಗ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.
ನಗರದಲ್ಲಿ BBMP ಅಧಿಕಾರಿಗಳಿಗೆ ಪ್ರಭಾವಿಗಳ ಮೇಲೆ ಯಾಕೆ ಇಷ್ಟೋಂದು ಪ್ರೀತಿ? ಶ್ರೀಮಂತರ ಮನೆ, ವಿಲ್ಲಾ, ಅಪಾರ್ಟ್‌ಮೆಂಟ್ ತೆರವಿಗೆ BBMPಗೆ ಧಮ್ ಇಲ್ವಾ? ಒತ್ತುವರಿ ತೆರವು ವಿಚಾರದಲ್ಲಿ ಸಾಮಾನ್ಯ ಜನರ ಮನೆ ಮಾತ್ರ ಕಣ್ಣಿಗೆ ಕಾಣುತ್ತಾ? ಸಿಎಂ ಅವರ ರೋಷಾವೇಶ ಬರೀ ಮಾತಿಗಷ್ಟೇ ಸೀಮಿತ ಆಯ್ತಾ? ಶ್ರೀಮಂತರ ಮನೆ BBMP ಟಚ್ ಮಾಡೋಕೆ ಹಿಂದೇಟು ಹಾಕ್ತಿರೋದೇಕೆ ಎಂದು ಪ್ರಶ್ನೆಯಾಗಿಯೇ ಉಳಿದಿದೆ.
ಇನ್ನು, ನಗರ ಪಾಲಿಕೆ ಬಡವರ ಮೇಲೆ ಶೂರತ್ವ, ಬಲಾಢ್ಯರ ಮೇಲೆ ಸೈಲೆಂಟ್ ಆಗಿದ್ದು, ಐಟಿ-ಬಿಟಿ ಕಂಪನಿಗಳ ಪಟ್ಟಿಯೂ ರೆಡಿ ಆಗಿದ್ರೂ ತೆರವಿಗೆ ಹಿಂದೇಟು ಯಾಕೆ? ಆಗಸ್ಟ್‌ನಲ್ಲೇ ಐಟಿ-ಬಿಟಿ ಕಂಪನಿಗಳ ಪಟ್ಟಿ ರೆಡಿ ಮಾಡಿರುವ BBMP. ರಾಜಕಾಲುವೆ ಮೇಲೆ ಐಷಾರಾಮಿ ಕಟ್ಟಡಗಳ ನಿರ್ಮಾಣ ಮಾಡಿರೋ ಬಿಲ್ಡರ್ಸ್ ಈಗಾಗಲೇ ಮಹದೇವಪುರ ವಲಯದ 16 ಕಂಪನಿಗಳ ಲಿಸ್ಟ್ ಪಾಲಿಕೆ ಕೈಯಲ್ಲಿದೆ.