ಚಿಕ್ಕೋಡಿ : ಅ.15 ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವ ಹೊಸ್ತಿಲಲ್ಲಿ ವಿವಿಧ ರೀತಿಯಾಗಿ ಅಭಿಮಾನವು ದೇಶಾದ್ಯಂತ ವ್ಯಕ್ತಪಡಿಸಲಾಗುತ್ತಿದೆ. ಆದರೆ ಇಲ್ಲೋಬ್ಬ ಕೇವಲ ಮೂರುವರೆ ಬಾಲಕ ವರ್ಷದ ವಂದೇ ಮಾತರಂ ಹಾಡನ್ನು ಹಾಡಿ, ಆ ಹಾಡಿಗೆ ತಾನೇ ನಟನೆಯನ್ನು ಮಾಡಿ ಗಮನ ಸೆಳೆದಿದ್ದಾನೆ.
ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದು ನಟನೆಯನ್ನು ಮಾಡುತ್ತಿರುವ ಈ ಬಾಲಕನ ಹೆಸರು ಓಜಸ ಧಾಬಡೆ. ಈ ಬಾಲಕನಿಗೆ ಕೇವಲ ಮೂರುವರೆ ವರ್ಷ ಮೂಲತಃ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದವನು. ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವ ಹಿನ್ನಲೆಯಲ್ಲಿ ಓಜಸ್ ಧಾಬಡೆ ಎನ್ನುವ ಬಾಲಕ ವಿಶೇಷ ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾನೆ.
ವಂದೇ ಮಾತರಂ ಹಾಡನ್ನು ಹಾಡಿ, ಆ ಹಾಡಿಗೆ ನಟನೆಯನ್ನು ಮಾಡಿ ಗಮನಸೆಳೆದಿದ್ದಾನೆ. ದೀಪಕ ಧಾಬಡೆ, ಸುಷ್ಮಾ ಧಾಬಡೆ ದಂಪತಿಗಳ ಮಗನಾದ ಓಜಸ್’ನ ವಂದೇ ಮಾತರಂ ಹಾಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದೆ.
ದೀಪಕ, ಸುಷ್ಮಾಯವರು ಸಾಪ್ಟವೇರ ಇಂಜಿನಿಯರಿಗಾಗಿ ಮಹಾರಾಷ್ಟ್ರದ ಪುಣೆಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಮೃತಮಹೋತ್ಸವ ಹಿನ್ನಲೆಯಲ್ಲಿ ತಮ್ಮ ಮಗನಿಗೆ ವಂದೇ ಮಾತರಂ ಹಾಡನ್ನು ಹಾಡಿಸಿ, ನಟನೆಯನ್ನು ಮಾಡಿಸಿ ಈ ದಂಪತಿಗಳು ಭಾರತ ದೇಶದ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.